ಗುಳೆ ಹೋಗಿ ಬರುತ್ತಿದ್ದವರ ವಾಹನ ಲಿಂಗಸುಗೂರಲ್ಲಿ ಪಲ್ಟಿ, 30 ಜನರಿಗೆ ಗಾಯ

29032020 Lingasaguru Vehicle accident
Published on

ಲಿಂಗಸುಗೂರು: ಬೆಂಗಳೂರಿಗೆ ಗುಳೆ ಹೋದವರನ್ನು ಕರೆ ತರುತ್ತಿದ್ದ ಟಾಟಾ 407 ವಾಹನ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಭಾನುವಾರ ಪಲ್ಟಿಯಾಗಿದ್ದು, 30 ಜನರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಶಹಪುರ ತಾಲೂಕಿನ ಹೆಬ್ಬಾಳ ಸೇರಿ ಇತರೆ ಗ್ರಾಮಗಳಿಗೆ ಗುಳೆ ಹೋದ ಮಕ್ಕಳು, ಮಹಿಳೆಯರು ಸೇರಿ ಸುಮಾರು 40 ಕೂಲಿಕಾರರನ್ನು ಕರೆತರುತ್ತಿದ್ದ ವಾಹನ ಪಲ್ಟಿಯಾಗಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು 10 ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net