ಯಂತ್ರದ ಮೂಲಕ ಭತ್ತ ನಾಟಿಗೆ ಚಾಲನೆ

060820 Anehosuru Machine Paddy Planting Michine
ಲಿಂಗಸುಗೂರು ಸಮೀಪದ ಆನೆಹೊಸೂರು ಗ್ರಾಮದಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಹನುಮಂತ ಚಾಲನೆ ನೀಡಿದರು.
Published on

ಲಿಂಗಸುಗೂರು: ತಾಲೂಕಿನ ಆನೆಹೊಸೂರು ಗ್ರಾಮದ ರೈತ ಗೋಪಿರಡ್ಡಿ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಹನುಮಂತ ಗುರುವಾರ ಚಾಲನೆ ನೀಡಿದರು.

ನಂತರ ಅವರು ಮಾತನಾಡಿ, ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಅನೇಕ ಕೃಷಿ ಸಲಕರಣೆಗಳು ಲಭ್ಯವಿದ್ದು, ಹೆಚ್ಚುವರಿ ಇಳುವರಿ ಮತ್ತು ಆದಾಯ ಪಡೆಯಲು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಸಂಸ್ಥೆಯಿಂದ ತಾಲೂಕಿನಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಂಸ್ಥೆ ಮೇಲ್ವಿಚಾರಕ ಮಹ್ಮದ್ ಅಲಿ, ಪ್ರಬಂಧಕ ಪ್ರಭು ಹಿರೇಮಠ, ವಲಯ ಮೇಲ್ವಿಚಾರಕ ಪ್ರಭಾಕರ್, ಸೇವಾ ಪ್ರತಿನಿಧಿ ಕುಸುಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net