

ಬೆಳಗಾವಿ: ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಆ.21 ರಂದು ಬೆಳಗಾವಿಯ ಸೇಂಟ್ ಮೇರಿಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ 2023-24 ನೇ ಸಾಲಿನ ಜಿಲ್ಲಾಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಫುಟ್‌ಬಾಲ್ ತಂಡದಲ್ಲಿ ಅಯಾನ್ ಕೆ., ರೆಹಾನ್ ಕೆ., ಸ್ಪರ್ಶ ಡಿ., ಜೈದೇವ್ ಎಸ್., ತಾನಿಸ್ಕ್ ಎ., ಸುದರ್ಶನ್ ಎಂ., ಅಭಿಷೇಕ ಸಿ., ಸಲ್ಮಾನ್ ಎಂ., ಖಿಜರ್ ಡಿ., ಅಮಾನ್ ಬಿ., ಜಯಾನ್ ಡಿ., ಸುದಾಂಶು ಸಂಜು, ಆಯುಷ್ ಕೆ., ಜಿಯಾ ಕೆ., ಸೊಹೀಲ್ ಕೆ., ಸಮಿ ಎನ್ ಮತ್ತು ಸಿನಾನ್ ಎಸ್. ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು. ಇನ್ನು ಜಿಲ್ಲಾಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಲಿಂಗರಾಜ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಓಂ ಕಳಸಣ್ಣವರ, ಅಥರ್ವ ಹುಬಳಿಕರ್ ಮತ್ತು ಸೌರಭ ಭಾವಿಕಟ್ಟಿ ವಿಜೇತರಾಗಿ (ಬಾಲಕರು) ಮತ್ತು ಐಶ್ವರ್ಯ ತಳವಾಲ್ಕರ್ ಮತ್ತು ಸಂಪದಾ ರೇಶ್ಮಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಳಗಾವಿಯ ಡಿವೈಇಎಸ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಬಾಕ್ಸಿಂಗ್‌ನಲ್ಲಿ ವಿದ್ಯಾರ್ಥಿಗಳಾದ ಅಂಶುಲ್.ವಿ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಸಿದ್ದಂತ್ ಯಾದವ್ ಅವರು -63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ರಾಮದುರ್ಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ತೇಜಸ್ವಿನಿ ಬಡಕನ್ನವರ್ ಚಿನ್ನದ ಪದಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರಾದ ಡಾ.ಎಚ್.ಎಸ್.ಮೇಲಿನಮನಿ, ಗಿರಿಜಾ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ಮತ್ತು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.