ಲಿಂಗರಾಜ ಕಾಲೇಜು ಸಮಗ್ರ ವೀರಾಗ್ರಣಿ

01
Published on

ಬೆಳಗಾವಿ: ಇತ್ತೀಚೆಗೆ ಹುಬ್ಬಳ್ಳಿಯ ಆಕ್ಸಫರ್ಡ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವ್ಯವಸ್ಥಾಪನ ಸ್ಪರ್ಧೆ ವೈಬ್‌ರೆನ್ಸ್ -2020ರಲ್ಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಮಾರುಕಟ್ಟೆ ವಿಭಾಗದ ಸ್ಪರ್ಧೆಯಲ್ಲಿ ರಿಷಬ್ ಕೋರೆ ಮತ್ತು ಸುಹೆರ್ ಪ್ರಥಮ, ಶುಭಂ ಹಬೀಬ ಮತ್ತು ಅಕ್ಷತ್ ನಾವಲ ಮೀಡಿಯಾ ವಿಭಾಗದಲ್ಲಿ ಪ್ರಥಮ, ಶೃತಿ ಹಂಗಿರಗೇಕರ್ ಮತ್ತು ಜ್ಯೋತಿ ಶಿರಾಳಕರ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಅತ್ಯುತ್ತಮ ವ್ಯವಸ್ಥಾಪಕ ವಿಭಾಗದಲ್ಲಿ ಕಿಶನಕುಮಾರ್ ಪ್ರಥಮ ಹಾಗೂ ಖುಷಿ ಮೆಹ್ತಾ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರೊ.ಡಾ.ಪಿ.ಆರ್.ಕಡಕೋಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net