ಲಿಂಗರಾಜರ ಬದುಕು ಆದರ್ಶಮಯ

IMG-20250110-WA0015.jpg
Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.

ಅತಿಥಿಗಳಾಗಿದ್ದ ಪ್ರಾಧ್ಯಾಪಕಿ ಡಾ. ವಿಜಯಶ್ರೀ ಹಿರೇಮಠ ಅವರು ಮಾತನಾಡಿ, ಲಿಂಗರಾಜರ ಆದರ್ಶಗಳನ್ನು ಮತ್ತು ನಿಸ್ವಾರ್ಥ ಸಮಾಜ ಸೇವೆಯನ್ನು ವಿವರಿಸಿದರು. ಅವರ ಬದುಕು ಆದರ್ಶಮಯವಾಗಿತ್ತು ಎಂದರು.

ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕೆಂಬ ಲಿಂಗರಾಜರ ಕನಸು ಹಾಗೂ ಉದ್ದೇಶ ಕೆಎಲ್ಇ ಸಂಸ್ಥೆಯ ಮೂಲಕ ಸಾಕಾರಗೊಂಡಿದ್ದು ಸ್ಮರಣೀಯ ಎಂದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಶ್ರುತಿ ಪ್ರಾರ್ಥನೆ ಹಾಡಿದರು. ಸುನಂದಾ ಕುಂದಗೋಳ ಪರಿಚಯಿಸಿದರು. ಸಂಗೀತಾ ಕಟಗಿ ಸ್ವಾಗತಿಸಿದರು. ಕೀರ್ತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರೀತಿ ನಂದೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net