ಲಿಂಗದಹಳ್ಳಿ ಕರಿಯಮ್ಮ ದೇವಿ ಬ್ರಹ್ಮ ರಥೋತ್ಸವ ಸಂಪನ್ನ

LDH1A
ಲಿಂಗದಹಳ್ಳಿ ಗ್ರಾಮದೇವತೆ ಶ್ರೀ ಕರಿಯಮ್ಮ ಮತ್ತು ಚಿಕ್ಕಮ್ಮ ದೇವಿಯವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಲಿಂಗದಹಳ್ಳಿ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗದಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಚಿಕ್ಕಮ್ಮ ದೇವಿ ಬ್ರಹ್ಮ ರಥೋತ್ಸವ ಶನಿವಾರ ಸಂಪನ್ನಗೊಂಡಿತು.
ಲಿಂಗದಹಳ್ಳಿ ಹೋಬಳಿಯ ವಿವಿಧ ಗ್ರಾಮಗಳ ಪಾನಕದ ಬಂಡಿಗಳು ಶ್ರೀ ದೇವಿಯ ಬಾವುಟದ ಮೈದಾನದಲ್ಲಿ ಪ್ರದಕ್ಷಿಣೆ ಹಾಕಿ ನಂತರ ಬ್ರಹ್ಮರಥದ ಸುತ್ತಲು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಜಾತ್ರೆಗೆ ಆಗಮಿಸಿದ್ದ, ಭಕ್ತಾಧಿಗಳಿಗೆ ಬೆಲ್ಲದ ಪಾನಕ ಮತ್ತು ಕೋಸಂಬರಿಗಳನ್ನು ನೀಡಿ ಸತ್ಕರಿಸಲಾಯಿತು.
ಲಿಂಗದಹಳ್ಳಿ, ಮಲ್ಲೇನಹಳ್ಳಿ, ನಂದಿಬಟ್ಟಲು ತಣಿಗೆಬೈಲು, ಗುಳ್ಳದಮನೆ, ಯರಂದಕಲು, ಕೆಂಚಾಪುರ, ಉಡೇವಾ ಸೇರಿದಂತೆ, ಹೋಬಳಿ, ವ್ಯಾಪ್ತಿಯ ವಿವಿಧ ಗ್ರಾಮದ ನೂರಾರು ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿ ರಥವನ್ನು ಎಳೆದು ಬಾಳೆಹಣ್ಣು, ಹೂವು, ದವನ, ಮುಂತಾದ ಮಂಗಳ ದ್ರವ್ಯಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಲಿಂಗದಹಳ್ಳಿ ಠಾಣೆಯಿಂದ ಪ್ರತಿ ವರ್ಷ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದ ಬ್ರಹ್ಮ ರಥಕ್ಕೆ ಹೂವಿನ ಹಾರವನ್ನು ಸಮರ್ಪಿಸಲಾಯಿತು. ಜಾತ್ರಾ ಮಹೋತ್ಸವದಲ್ಲಿ ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎಮ್.ಕೆ. ಚಂದ್ರಪ್ಪ, ಸತೀಶ್, ಮಾಜಿ ಸದಸ್ಯ ಅನಿಲ್ ಕುಮಾರ್ ಸಮಾಜ ಸೇವಕಿ, ರಚನಾ ಶ್ರೀನಿವಾಸ್, ಲಿಂಗದಹಳ್ಳಿ ಠಾಣಾಧಿಕಾರಿ ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net