ಧರ್ಮ, ಸಂಸತಿ ಬೆಳೆಯಲು ಲಿಂಗ ದೀಕ್ಷೆ ಸಹಕಾರಿ

16 RMN-MGD P02
Published on

* 110 ಮಂದಿ ಲಿಂಗಾಯತ ಯುವಕ, ಯುವತಿಯರಿಗೆ ದೀಕ್ಷೆ

ಮಾಗಡಿ

ಯುವಕರಿಗೆ ಲಿಂಗ ದೀಕ್ಷೆ  ನೀಡುವುದರಿಂದ ಸಂಸ್ಕಾರದ ಜತೆಗೆ ಧರ್ಮ, ಸಂಸತಿ ಬೆಳೆಯುತ್ತದೆ. ದುಶ್ಚ್ಚಟಗಳು ಅಳಿಯುತ್ತವೆ ಎಂದು ಸುತ್ತೂರು ಶ್ರೀ ಮಠದ ಧಾರ್ಮಿಕ ದತ್ತಿಯ ವಿಭಾಗದ ಉಸ್ತುವಾರಿ ಸೋಮಶೇಖರ್​ ತಿಳಿಸಿದರು.

ತಾಲೂಕಿನ ಗಟ್ಟೀಪುರ ಬೆಟ್ಟದ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸುಮಾರು ಗ್ರಾಮೀಣ ಭಾಗದ ಲಿಂಗಾಯತ ಸುಮಾರು 110 ಮಂದಿ ಯುವಕ, ಯುವತಿಯರಿಗೆ ಲಿಂಗ ದೀಕ್ಷೆ ನೀಡಿದ ನಂತರ ಮಾತನಾಡಿದರು. ಸುತ್ತೂರು ಶ್ರೀಮಠ ನಗರ ಪ್ರದೇಶದೆಲ್ಲೆಡೆ ಮಕ್ಕಳಿಗೆ ಮೆಡಿಕಲ್​, ಇಂಜಿನಿಯರಿಂಗ್​ ಕಾಲೇಜು, ಆಸ್ಪತ್ರೆ ಕಟ್ಟಿಸಿ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದೆ ಎಂದರು.

ಗ್ರಾಮೀಣ ಜನರಿಗೆ ಏನೂ ಕೊಡಲಾಗುತ್ತಿಲ್ಲ ಎಂಬ ಕೊರಗಿದ್ದ ಕಾರಣ ಶ್ರೀಮಠವು ಲಿಂಗ ದೀಕ್ಷೆ  ಕೊಡಲು 1 ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹೀಗೆ ಹಲವು ರಾಜ್ಯಗಳಲ್ಲಿರುವ ಲಿಂಗಾಯತ ಯುವಕರು ಕುಡಿತ, ಬೀಡಿ, ಸಿಗರೇಟ್​, ಗಾಂಜಾ ಸೇವನೆ ಸೇರಿ ಅನೇಕ ಚಟಗಳಿಂದ ದೂರವಿರಲು ಅವರಲ್ಲಿ ಧರ್ಮ ದೀಕ್ಷೆ ಕುರಿತು ಅರಿವು ಮೂಡಿಸಿ ಲಿಂಗ ದೀಕ್ಷೆ ನೀಡಲಾಗುತ್ತಿದೆ ಎಂದರು.

ಲಿಂಗ ದೀಕ್ಷೆ ಪಡೆದವರು ದಿನನಿತ್ಯ ಬೆಳಗ್ಗೆ ಎದ್ದು, ಸ್ನಾನ ಮಾಡಿ ಶುಭ್ರವಾದ ಶಿವವಸ್ತ್ರ ತೊಟ್ಟು, ಅಂಗೈಯಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪೂಜೆ ಪುರಸ್ಕಾರ ಮಾಡುವುದರಿಂದ ಅವರಲ್ಲಿ ಧಾರ್ಮಿಕ ಶಕ್ತಿ ಅನಾವರಣಗೊಳ್ಳುತ್ತದೆ. ಇದುವರೆಗೆ ಸುಮಾರು 91 ಸಾವಿರ ಮಂದಿಗೆ ಲಿಂಗದೀೆ ನೀಡಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಮಧು ಮಾತನಾಡಿ, ಇಲ್ಲಿನ ಬೆಟ್ಟದ ಸೋಮೇಶ್ವರಸ್ವಾಮಿ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚು ಅನುದಾನ ತಂದು ಸುಂದರವಾದ ಪ್ರವಾಸಿ ತಾಣವನ್ನಾಗಿಸಬೇಕೆಂದು ಶಾಸಕ ಎಚ್​.ಸಿ.ಬಾಲಕೃಷ್ಣ ಅವರಲ್ಲಿ ಮನವಿ ಮಾಡಿ ಆಗ್ರಹಿಸುತ್ತೇನೆ ಎಂದು ತಿಳಿಸಿದರು.

ಸೋಮೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಚಿಕ್ಕವಿರ ಒಡೆಯರು, ಉಮೇಶ್​, ಶವಕುಮಾರಯ್ಯ, ಶಿವಪ್ಪ, ಪ್ರಕಾಶ್​, ಶಿಕ್ಷಕ ರಾಜಣ್ಣ, ಬಸವರಾಜು, ಶಿವಕುಮಾರಯ್ಯ ಗ್ರಾಮಸ್ಥರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net