ವಿದ್ಯುತ್ ಸ್ಪರ್ಶಿಸಿ ಲೈನ್‌ಮನ್ ಮರಣ

lineman death
Published on

ಮುಂಡರಗಿ: ವಿದ್ಯುತ್ ಸ್ಪರ್ಶದಿಂದಾಗಿ ಕರ್ತವ್ಯ ನಿರತವಾಗಿದ್ದ ಹೆಸ್ಕಾಂ ಲೈನ್‌ಮನ್ ಸಾವನ್ನಪ್ಪಿದ ಘಟನೆ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಪಟ್ಟಣದ ಗಂಗಾಧರಯ್ಯ ರುದ್ರಯ್ಯ ಹಿರೇಮಠ (51) ಮೃತ ಲೈನ್‌ಮನ್. ಕೊರ್ಲಹಳ್ಳಿ ಗ್ರಾಮದ ರೈತ ಸೀತಾರಾಂ ರಾಜು ಅವರ ಜಮೀನಿನಲ್ಲಿ ಗಂಗಾಧರಯ್ಯ ಅವರು ಟಿಸಿ ಸಮಸ್ಯೆ ಸರಿಪಡಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ತಕ್ಷಣ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net