

ಮೈಸೂರು: ವಿದ್ಯುತ್ ಸಂಪರ್ಕ ನೀಡಲು ಲಂಚದ ಕೇಳಿದ್ದ ಸೆಸ್ಕ್‌ನ ಎಇ ಜಿ.ಹರೀಶ್, ಜೂನಿಯರ್ ಲೈನ್‌ಮನ್ ಗುಂಡಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕುವೆಂಪು ನಗರದಲ್ಲಿರುವ ಸೆಸ್ಕ್‌ನ ಉಪ ವಿಭಾಗದ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ಮೂಲದ ಅಭಿಷೇಕ್ ಅವರು ಮೈಸೂರು ನಗರದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದು, ಈ ವೇಳೆ ಎಇ ಹರೀಶ್ ಅವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಭಿಷೇಕ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಸಂಜೆ ಕಚೇರಿಯಲ್ಲಿ ಎಇ ಹರೀಶ್ ಪರವಾಗಿ ಮಾತನಾಡಿದ ಲೈನ್‌ಮನ್ ಗುಂಡಪ್ಪ ಲಂಚ ಸ್ವೀಕರಿಸುತ್ತಿದ್ದಾಗ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದೆ.