ವಿದ್ಯುತ್​ ಕಂಬವೇರಿದ ಜೆಸ್ಕಾಂ ನೌಕರ ಸಾವಿಗೀಡಾಗಿದ್ದು ವಿದ್ಯುತ್​ ಶಾಕ್​ನಿಂದಲ್ಲ!

Lineman
Published on

ಬಳ್ಳಾರಿ: ಜೆಸ್ಕಾಂ ನೌಕರರೊಬ್ಬರು ಮೃತಪಟ್ಟಿರುವ ಘಟನೆ ಕಂಪ್ಲಿ ತಾಲೂಕಿನ ಇಟಗಿ ಗ್ರಾಮದಲ್ಲ ಶುಕ್ರವಾರ ರಾತ್ರಿ ನಡೆದಿದೆ.

ಹನುಮಂತ (35) ಮೃತಪಟ್ಟ ದುರ್ದೈವಿ. ಶುಕ್ರವಾರ ರಾತ್ರಿ ವಿದ್ಯುತ್ ದುರಸ್ತಿ ಸರಿಪಡಿಸಲು ಹನಮಂತ ಕಂಬವೇರಿದ್ದ. ದುರಸ್ಥಿ ಮಾಡುವಾಗ ವಿದ್ಯುತ್​ ತಂತಿ ತಗುಲಿ ಕಂಬದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಬೆನ್ನು ಮಾಡಿ ಬಿದ್ದಿದ್ದರಿಂದ ತಲೆ ಹಿಂಬಂದಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಂಪ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net