ಅಳಿಸಿದ ಬೆರಳ ಗೆರೆ, ಜನರ ಬದುಕಿಗೆ ಬರೆ!

Gere
Published on

| ಶಿವಶಂಕರ್ ಎಂ.ಹೆಬ್ಬಳ್ಳ ಮೈಸೂರು

ಕೈನಲ್ಲಿ ಗೆರೆ ಚೆನ್ನಾಗಿದ್ದರೆ ಅದೃಷ್ಟ ಒಲಿಯುತ್ತೆ ಅಂತಾರೆ. ಈ ಮಾತು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಕೈ ಬೆರಳುಗಳ ಗೆರೆ(ರೇಖೆ) ಅಳಿಸಿಹೋದವರು ಮಾತ್ರ ನತದೃಷ್ಟರಾಗುತ್ತಿದ್ದಾರೆ!

ದೇಶದ ಪ್ರತಿ ನಾಗರಿಕರಿಗೂ ಗುರುತಿನ ಚೀಟಿ ನೀಡುವ ಸಲುವಾಗಿ ಜಾರಿಗೆ ತಂದ ಆಧಾರ್ ಸೇವೆ ಪಡೆಯಲು ಕೈ ಬೆರಳುಗಳೇ ಆಧಾರ. ಆದರೆ ಆ ಬೆರಳುಗಳ ಗೆರೆ ಅಳಿಸಿಹೋಗಿರುವವರಿಗೆ ಪಡಿತರ ಸೇರಿದಂತೆ ಸರ್ಕಾರಿ ಸೇವೆಗಳೇ ಕೈತಪ್ಪಿ ಹೋಗುತ್ತಿವೆ. ಗೆರೆಯಿಲ್ಲದ ಬೆರಳಿನ ಗುರುತನ್ನು ಬಯೋಮೆಟ್ರಿಕ್ ಮಿಷನ್ ಸ್ವೀಕರಿಸದ ಕಾರಣ ಶ್ರಮದಾಯಕ ಕೆಲಸ ಮಾಡುವವರು, ವೃದ್ಧರು ಸೇರಿದಂತೆ ಹಲವರಿಗೆ ತೊಂದರೆಯಾಗಿದೆ. ಈ ಮೊದಲು ಪಡಿತರ ಪಡೆಯುವುದಕ್ಕೆ ಮೊಬೈಲ್ ಒಟಿಪಿ ಸಂಖ್ಯೆ ಕಡ್ಡಾಯವಾಗಿತ್ತು. ಆದರೆ ಬಯೋಮೆಟ್ರಿಕ್ ಜಾರಿಯಾದ ಮೇಲೆ ಅನೇಕರು ಕೈಬೆರಳಿನ ರೇಖೆ ಸಮಸ್ಯೆಯಿಂದ ಪಡಿತರ ಪಡೆಯಲಾಗುತ್ತಿಲ್ಲ. ಇದರ ಜತೆಗೆ ಸರ್ಕಾರಿ ಸೇವೆ, ಬ್ಯಾಂಕ್, ಹೆಲ್ತ್ ಕಾರ್ಡ್, ಖಾಸಗಿ ಮೊಬೈಲ್ ನೆಟ್​ವರ್ಕ್​ಗಳು, ಸಹಕಾರ ಸಂಘಗಳು, ಡೇರಿ, ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ಸೌಲಭ್ಯಗಳನ್ನು ಪಡೆಯುವುದಕ್ಕೂ ಸಮಸ್ಯೆಯಾಗಿದೆ.

ಗುರುತಿಗಾಗಿ ಸರ್ಕಸ್

ಗ್ರಾಮೀಣ ಭಾಗದಲ್ಲಿ ಬಹá-ತೇಕ ಮಹಿಳೆಯರು, ಪುರá-ಷರು ಕೂಲಿ ಕೆಲಸಕ್ಕೆ ಹೋಗá-ತ್ತಾರೆ. ವರ್ಷಾನá-ಗಟ್ಟಲೆ ಕೂಲಿ ಕೆಲಸ ಮಾಡಿ ಅವರ ಬೆರಳá-ಗಳು ಸವೆದು ರೇೆಗಳೂ ಅಳಿಸಿಹೋಗುತ್ತವೆ. ಇದರಿಂದ ನ್ಯಾಯಬೆಲೆ ಅಂಗಡಿ ಅಂಚೆ ಕಚೇರಿಗಳಲ್ಲಿ ಹೆಬ್ಬೆಟ್ಟು ನೀಡುವಾಗ ತಿರಸ್ಕೃತವಾಗುತ್ತಿದೆ. ಬಯೋಮೆಟ್ರಿಕ್ ಬಾರದಿದ್ದರೆ ಗಂಟೆಗಟ್ಟಲೇ ಕಾದು, ಕೈ ಬೆರಳá-ಗಳನ್ನು ಉಜ್ಜುವುದು, ನೀರನ್ನು ಹಾಕಿ ಒದ್ದೆ ಮಾಡá-ವುದು ಇನ್ನಿತರ ಸರ್ಕಸ್ ಮಾಡಬೇಕಾದ ಸ್ಥಿತಿ ಇದೆ. ಹೆಬ್ಬೆಟ್ಟು ಗುರುತು ಪತ್ತೆಹಚ್ಚದಿದ್ದರೆ ಮನೆಯ ಬೇರೆ ಸದಸ್ಯರು ಬಂದು ಹೆಬ್ಬೆಟ್ಟು ನೀಡಿ ಪಡಿತರ ಪಡೆಯಬೇಕಿದೆ. ಮಹಿಳೆಯರು, ವೃದ್ಧರ ಮಕ್ಕಳು, ಸೊಸೆಯಂದಿರು ಬೇರೆ ಕಡೆ ನೆಲೆಸಿದ್ದರೆ ಅಲ್ಲಿಂದ ಬಂದು ಪಡಿತರ ಪಡೆಯá-ತ್ತಿರá-ವ ನಿರ್ದೇಶನಗಳಿವೆ.

ಒಟಿಪಿ ರದ್ದು

ಲಾಕ್​ಡೌನ್ ಸಂದಭರ್ದಲ್ಲಿ ಕರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಬ್ಬೆಟ್ಟಿನ ಗುರá-ತು ನೀಡá-ವ ಬದಲು ಗ್ರಾಹಕರ ಮೊಬೈಲ್​ಗೆ ಒಟಿಪಿ ಕಳá-ಹಿಸಿ ಪಡಿತರ ವಿತರಿಸಲಾಗá-ತ್ತಿತ್ತು. ಇದೀಗ ಆ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಿ ಆಧಾರ್ ಒಟಿಪಿ ವ್ಯವಸ್ಥೆ ತರಲಾಗಿದೆ. ಹೆಬ್ಬೆಟ್ಟಿನ ಗುರá-ತು ಬಾರದವರು ಒಟಿಪಿ ಹೇಳಿ ಪಡಿತರ ಪಡೆಯಬಹá-ದು. ಆದರೆ, ಕೆಲ ಗ್ರಾಹಕರು ಆಧಾರ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡದ ಹಿನ್ನೆಲೆಯಲ್ಲಿ ಬಯೊಮೆಟ್ರಿಕ್ ಅನ್ನೇ ಕೊಡಬೇಕಿದೆ.

ನಾನು ಕೂಲಿ ಕೆಲಸ ಮಾಡá-ತ್ತೇನೆ. ಪಡಿತರ ಪಡೆಯಲು ಹೆಬ್ಬೆಟ್ಟಿನ ಗುರá-ತು ನೀಡಿದರೆ ತೆಗೆದá-ಕೊಳ್ಳುವುದಿಲ್ಲ. ಕೈ ಬೆರಳನ್ನು ಉಜ್ಜಬೇಕು. ಇಲ್ಲವೇ ಬೆರಳನ್ನು ನೀರಿನಲ್ಲಿ ಒದ್ದೆಮಾಡಿಕೊಂಡು ನಿಲ್ಲಬೇು. ಅದೂ ಆಗದಿದ್ದರೆ ನನ್ನ ಮಗನನ್ನು ಕರೆಯಿಸಿ ಹೆಬ್ಬೆಟ್ಟು ಗುರá-ತು ನೀಡಿ ಪಡಿತರ ಪಡೆಯಬೇಕು. ದೇವಮ್ಮ ಪಟ್ಟಣ ನಿವಾಸಿ, ಎಚ್.ಡಿ.ಕೋಟೆ. 7 ವರ್ಷಗಳಿಂದ ಗಾರೆ ಕೆಲಸ ಮಾಡುತ್ತಿದ್ದೇನೆ. ಇಟ್ಟಿಗೆ, ಸಿಮೆಂಟ್, ಕಲ್ಲುಗಳನ್ನು ಹಿಡಿಯುವ ಕೈಹಸ್ತ ನುಣುಪಾಗಿ ಹೋಗಿದೆ. ಆಧಾರ್ ಕಾರ್ಡ್​ಗಾಗಿ ಹಿಂದೆ ಹೆಬ್ಬೆಟ್ಟು ಗುರುತು ನೀಡಿದ್ದನ್ನು ಹೊರತುಪಡಿಸಿದರೆ ಇತ್ತೀಚೆಗೆ ಸಿಮ್ ಖರೀದಿಸಲೂ ಹೆಬ್ಬೆಟ್ಟು ಗುರುತು ನೀಡಲಾಗುತ್ತಿಲ್ಲ. ಮಲ್ಲಣ್ಣ, ಕಾಡಳ್ಳಿ, ಚಾಮರಾಜನಗರ.

ಎಲ್ಲೆಲ್ಲಿ ಕಾಡುತ್ತಿದೆ ಸಮಸ್ಯೆ

ಬ್ಯಾಂಕ್, ಅಂಚೆ ಕಚೇರಿ, ನ್ಯಾಯಬೆಲೆ ಅಂಗಡಿಗಳಲ್ಲಿ ವ್ಯಕ್ತಿಯ ಹೆಬ್ಬೆಟ್ಟಿನ ಗುರá-ತು (ಬಯೋಮೆಟ್ರಿಕ್) ನೀಡಿಯೇ ಸೌಲಭ್ಯ ಪಡೆಯಬೇಕು. ಇದರ ಜತೆಗೆ ಸರ್ಕಾರಿ ಸೇವೆ, ಬ್ಯಾಂಕ್, ಹೆಲ್ತ್ ಕಾರ್ಡ್, ಆರ್​ಟಿಒ, ಖಾಸಗಿ ಮೊಬೈಲ್ ನೆಟ್​ವರ್ಕ್​ಗಳು, ಸಹಕಾರ ಸಂಘಗಳು, ಡೇರಿ, ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ಸೌಲಭ್ಯಗಳನ್ನು ಪಡೆಯುವುದಕ್ಕೂ ಸಮಸ್ಯೆಯಾಗಿದೆ.

ಈ ಕುಟುಂಬಕ್ಕೆ ಪತ್ನಿಯ ಹೆಬ್ಬೆಟ್ಟೇ ಆಧಾರ

ಲಾಕ್​ಡೌನ್ ಅವಧಿಯಲ್ಲಿ ಮೈಸೂರಿಗೆ ಕೆಲಸಕ್ಕೆಂದು ಬಂದಿದ್ದ ಉತ್ತರ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ವಾಪಸ್ ಊರಿಗೆ ಹೋಗುತ್ತಿದ್ದರು. ಬ್ಯಾಂಕ್ ಪಾಸ್​ಬುಕ್, ಎಟಿಎಂ, ಮೊಬೈಲ್ ಎಲ್ಲವೂ ಕಳೆದುಹೋಗಿತ್ತು. ವಿಧಿಯಿಲ್ಲದೆ ಅಂಚೆ ಕಚೇರಿಯಲ್ಲಿ ಹಣ ಪಡೆಯಲು ಹೋದಾಗ ಅವರ ಹೆಬ್ಬೆಟ್ಟಿನ ಗುರá-ತು ಬಾರದೆ ನಾಲ್ಕೈದು ಬಾರಿ ಅಲೆದಿದ್ದರು. ಕೊನೆಗೆ ಹರಸಾಹಸ ಮಾಡಿ ಹೆಬ್ಬೆಟ್ಟಿನ ಗುರುತು ನೀಡಿ ಹಣ ಪಡೆದು ಊರಿಗೆ ತೆರಳಿದ್ದರು. ‘ಹೆಬ್ಬೆರಳ ಗುರುತು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ವೇಳೆ ಕೈ ಕೊಡುತ್ತದೆ. ಅಂಗಡಿ ಮಾಲೀಕರು ನಿಮ್ಮ ಹೆಬ್ಬೆರಳ ಗುರುತು ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಪತ್ನಿಯ ಹೆಬ್ಬೆಟ್ಟು ಗುರುತು ನೀಡಿ ಪಡಿತರ ಪಡೆದುಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಚಿಕ್ಕಬಸವ.

ಹೆಬ್ಬೆಟ್ಟಿನ ಗುರುತು ಬಾರದ ಗ್ರಾಹಕರಿಗಾಗಿ ಸಂಬಂಧಪಟ್ಟ ಇಲಾಖೆಯವರು, ಖಾಸಗಿ ಸಂಸ್ಥೆಗಳು ಕಣ್ಣನ್ನು ಸ್ಕ್ಯಾನ್ ಮಾಡುವ ಐರೀಸ್ ಸಾಧನ ಇಟ್ಟುಕೊಳ್ಳಬೇಕು. ಈ ಬಗ್ಗೆ ಯá-ಐಡಿಎಐ ಸೂಚನೆ ನೀಡಿದ್ದರೂ ಎಲ್ಲೂ ಪಾಲನೆಯಾಗುತ್ತಿಲ್ಲ. ಸಮಸ್ಯೆ ಬಗ್ಗೆ ಆರೋಗ್ಯ, ಆಹಾರ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಲಾಗಿದೆ. | ಎಚ್.ಎಸ್.ಲಕ್ಷ್ಮೀ ಆಧಾರ್ ಸಂಚಾಲಕಿ, ಮೈಸೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net