ಹಾಸನದಲ್ಲಿ ಮದ್ಯಕ್ಕಾಗಿ ಮೈಲುದ್ದ ಸಾಲು

hasan-liquor shop
Published on

ಹಾಸನ: ಮದ್ಯ ಮಾರಾಟಕ್ಕೆ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ಖುಷಿಗೊಂಡ ಮದ್ಯಪ್ರಿಯರು ಸೋಮವಾರ ಬೆಳಗಿನ ಜಾವದಿಂದಲೇ ಜಿಲ್ಲೆಯ ವಿವಿಧೆಡೆ ಮದ್ಯದಂಗಡಿಗಳ ಮುಂದೆ ಮೈಲುದ್ದ ಸಾಲಾಗಿ ನಿಂತಿದ್ದರು. ಜಾವಗಲ್ ಪಟ್ಟಣದ ಎಂಎಸ್ಐಎಲ್ ಅಂಗಡಿ ಮುಂದೆ ಬೆಳಗ್ಗೆ 4ರಿಂದಲೇ 1 ಕಿಮೀ ದೂರದಿಂದಲೇ ಸಾಲುಗಟ್ಟಿ ಬಂದು ಮದ್ಯ ಖರೀದಿಸಿದರು.

ಕೋವಿಡ್-19 ಲಾಕ್​ಡೌನ್​ನಿಂದಾಗಿ ಮದ್ಯಮಾರಾಟ ಸ್ಥಗಿತಗೊಂಡಿದ್ದರಿಂದ ಕಂಗಾಲಾಗಿದ್ದ ಎಣ್ಣೆಪ್ರಿಯರು, ಮದ್ಯ ಕುಡಿಯದೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಈಗ ಅಂಗಡಿ ಓಪನ್​ ಆಗಿದ್ದರಿಂದ ಖುಷಿಯಾಗಿದೆ ಎಂದು ಮದ್ಯದ ಪ್ಯಾಕೇಟ್​ ಹಿಡಿದು ಸಂಭ್ರಮಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಇನ್ನು ಹಾಸನ ನಗರದ ಹಲವೆಡೆ ಸಾಮಾಜಿಕ ಅಂತರ ಮರೆತ ಜನತೆ ಮದ್ಯ ಖರೀದಿಸಲು ಮುಗಿಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net