ಕುಣಿಗಲ್​ಗೆ ಯೋಜನೆ ಸೀಮಿತಗೊಳಿಸಿ

FotoJet (2)
Published on

ತಾಲೂಕು ಸಮಗ್ರ ನೀರಾವರಿ ಸಮಿತಿಯಿಂದ ಬಹತ್​ ಪ್ರತಿಭಟನೆ

ಕುಣಿಗಲ್​: ಹೇಮಾವತಿ ಲಿಂಕ್​ ಕೆನಾಲ್​ ಯೋಜನೆಯ ನೀರನ್ನು ಕುಣಿಗಲ್​ ತಾಲೂಕಿಗೆ ಸೀಮಿತಗೊಳಿಸುವಂತೆ ಒತ್ತಾಯಿಸಿ ತಾಲೂಕು ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿ ಪಟ್ಟಣದಲ್ಲಿ ಬುಧವಾರ ಬಹತ್​ ಪ್ರತಿಭಟನೆ ನಡೆಸಿತು.

ಜೆಡಿಎಸ್​, ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಗೂ ವಿವಿಧ ಸಂ ಸಂಸ್ಥೆಯ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ತಾಲೂಕು ಕಚೇರಿ ಅವರಿಗೂ ಮೆರವಣಿಗೆಯಲ್ಲಿ ತೆರಳಿ ಲಿಂಕ್​ ಕೆನಾಲ್​ ಮೂಲಕ ಹರಿದು ಬರುವ ಹೇಮೆ ನೀರನ್ನು ಕುಣಿಗಲ್​ ತಾಲೂಕಿಗೆ ಸೀಮಿತಗೊಳಿಸಬೇಕು. ಮಾಗಡಿ ರಾಮನಗರಕ್ಕೆ ಯಾವುದೇ ಕಾರಣಕ್ಕೂ ಹೇಮಾವತಿ ನೀರು ಬಿಡುವುದಿಲ್ಲ. ಲಿಂಕ್​ ಕೆನಾಲ್​ ಮೂಲಕ ಮಾಗಡಿಗೆ ನೀರು ಬಿಡಲು ಮುಂದಾಗಿರುವ ಶಾಸಕ ಡಾ.ರಂಗನಾಥ್​ ವಿರುದ್ಧ ಧಿಕ್ಕಾರ ಕೂಗಿದರು.

ತುಮಕೂರು ಜಿಲ್ಲೆಗೆ ಹಂಚಿಕೆಯಾದ ಹೇಮೇ ನೀರಿನಲ್ಲಿ 3.3 ಟಿಎಂಸಿ ನೀರು ತಾಲೂಕಿಗೆ ಹಂಚಿಕೆಯಾಗಿದೆ. ಆದರೆ ಸಮರ್ಪಕ ನಾಲೆ ನಿರ್ಮಾಣ ಮಾಡದ ಕಾರಣ ತಾಲೂಕಿಗೆ ಸಂಪೂರ್ಣ ನೀರು ಹರಿದು ಬರುತ್ತಿಲ್ಲ. ತಾಲೂಕಿನ ಹೋಬಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಯಾವುದೇ ಯೋಜನೆಗಳನ್ನು ಕಳೆದ 7 ವರ್ಷದಲ್ಲಿ ಶಾಸಕರು ಅನುಷ್ಠಾನಗೊಳಿಸಿಲ್ಲ. ತಾಲೂಕಿಗೆ ಹಂಚಿಕೆಯಾಗಿರುವ 3.3 ಟಿಎಂಸಿ ನೀರಿನಲ್ಲಿಯೇ ಮಾಗಡಿ ಭಾಗಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಲ್ಲನಾಯಕನಹಳ್ಳಿ ಹತ್ತಿರ ಮಾಗಡಿ ಭಾಗಕ್ಕೆ ನೀರು ಹರಿಸಲು ಬೃಹತ್​ ಗಾತ್ರದ ಮೋಟರ್​ ಮತ್ತು ಪೈಪುಗಳನ್ನ ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಾ ತಾಲೂಕಿಗೆ ಹಂಚಿಕೆಯಾಗಿರುವ 3.3 ಟಿಎಂಸಿ ನೀರು ಶಾಶ್ವತ ಸಮಗ್ರ ನೀರಾವರಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್​ ರಶ್ಮಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರಶಿವಕುಮಾರ್​ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್​, ತಾಲೂಕು ಜೆಡಿಎಸ್​ ಅಧ್ಯ ಬಿ ಎನ್​ ಜಗದೀಶ್​, ಮಹಾರಾಷ್ಟ್ರ ಶಿವಣ್ಣ, ಡಾ.ರವಿ ನಾಗರಾಜಯ್ಯ ,ರೆತ ಸಂದ ಆನಂದ ಪಟೇಲ್​ ಹುಲಿಕಟ್ಟೆ, ಹೋರಾಟಗಾರ ಜಿಕೆ ನಾಗಣ್ಣ, ತಾಲೂಕು ಬಿಜೆಪಿ ಅಧ್ಯ ದಿನೇಶ್​, ವಕೀಲರ ಸಂದ ಅಧ್ಯ ಸಿಂಗ್ರಯ್ಯ, ಕೆ ಆರ್​ಎಸ್​ ಪದ ರಾಜ್ಯ ಉಪಾಧ್ಯ ರು, ತಾಪಂ ಮಾಜಿ ಅಧ್ಯ ಹರೀಶ್​ ನಾಯಕ್​ ಹಾಗೂ ರೆತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net