ಆರ್.ಟಿ. ಬಳಿಗಾರ ಕಾರ್ಯವೈಖರಿ ಮಾದರಿ

4RAM1
Published on

ರಾಮದುರ್ಗ: ಆರ್.ಟಿ. ಬಳಿಗಾರ ಅವರ ಕಾರ್ಯವೈಖರಿ ಇಂದಿನ ಅಧಿಕಾರಿ ವರ್ಗಕ್ಕೆ ಮಾದರಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೇವಾ ನಿವತ್ತಿಯಾದ ಬಿಇಒ ಆರ್. ಟಿ ಬಳಿಗಾರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್.ಟಿ. ಬಳಿಗಾರ ಓರ್ವ ಅಧಿಕಾರಿ ಮಾತ್ರವಲ್ಲ. ಇಲಾಖೆಯ ಕೆಲವು ಮಹತ್ವದ ಯೋಜನೆಗಳ ಸಂಪನ್ಮೂಲ ವ್ಯಕ್ತಿಗಳಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅವರು ನಿವತ್ತಿ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಮಾತನಾಡಿ, ಒಳ್ಳೆಯ ಆಡಳಿತಗಾರ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದ ಆರ್. ಟಿ. ಬಳಿಗಾರ ಮೂರು ಬಾರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಬಣ್ಣೀಸಿದರು.

ಡಿವೈಪಿಸಿ ಬಿ.ಎಚ್.ಮಿಲಾನಟ್ಟಿ ಮಾತನಾಡಿದರು. ಆರ್.ಟಿ. ಬಳಿಗಾರ ದಂಪತಿಯನ್ನು ಸತ್ಕರಿಸಲಾಯಿತು. ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ನಿಜಗುಲಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ. ಹುಲ್ಲೂರ, ಗಣಾಚಾರಿ, ಈರಣ್ಣ ಬುಡ್ಡಾಗೋಳ, ಗೋಕಾಕ ಬಿಇಒ ಬಳಿಗಾರ, ಬ್ಯಾಂಕ್ ಆ್ ಬರೋಡಾ ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ ಇತರರು ಇದ್ದರು. ವೈ. ವಿ. ಮಳಲಿ ಸ್ವಾಗತಿಸಿದರು. ಶಿಕ್ಷಕ ಬೂದಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net