

ಚಿತ್ರದುರ್ಗ: ಯೋಗದ ಹಾಗೆಯೇ ಸಂಗೀತವೂ ಅತ್ಯಂತ ಪ್ರಾಚೀನ ಕಲೆಯಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ.ಬಸವರಾಜು ಹೇಳಿದರು.
ಅಂತಾರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ದಿನದ ಅಂಗವಾಗಿ ಜಿಲ್ಲಾ ಯೋಗಭ್ಯಾಸ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಎಲ್.ಎಸ್. ಚಿನ್ಮಯಾನಂದ ಅವರ ನಿವಾಸದಲ್ಲಿ ಕೇಂದ್ರ ಬಸವ ಸಮಿತಿ ಇತ್ತೀಚೆಗೆ ಆಯೋಜಿಸಿದ್ದ ವರ್ಷದ ಸಾಧಕ ಪುರಸ್ಕಾರಕ್ಕೆ ಭಾಜನರಾದ ಸಂಗೀತ ಕಲಾವಿದ ಪಂಡಿತ ತೋಟಪ್ಪ ಉತ್ತಂಗಿ ಅವರಿಗೆ ಚಿನ್ಮೂಲಾದ್ರಿ ಗಾನಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಯೋಗಭ್ಯಾಸದಿಂದ ಅನೇಕ ಕಾಯಿಲೆಗಳು ದೂರವಾಗುತ್ತವೆ. ಸಂಗೀತದ ಮೋಡಿಗೆ ಮನಸೋಲದವರಿಲ್ಲ. ಯೋಗಾಚಾರ್ಯರೆಂದೇ ಹೆಸರಾಗಿರುವ ಚಿನ್ಮಯಾನಂದ ಅವರು ಸಾವಿರಾರು ಜನರಿಗೆ ಯೋಗ ತರಬೇತಿ ನೀಡುತ್ತಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ ಮಾತನಾಡಿ, ಯೋಗ ಎನ್ನುವುದು ಒಂದು ವಿಜ್ಞಾನ. ಅದನ್ನು ಅನೇಕರು ಉಳಿಸಿ ಬೆಳೆಸಿದ್ದಾರೆ. ನಾನಾ ಪ್ರಕಾರಗಳ ಮೂಲಕ ಸಂಗೀತವೂ ಜನರನ್ನು ತಲುಪುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿನ್ಮಯಾನಂದ ಮಾತನಾಡಿ, ಯೋಗ, ಸಂಗೀತ ಮಾನವನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದರು.
ರಾಜಶೇಖರ್, ಬಸವರಾಜಕಟ್ಟಿ, ಬಿ.ಟಿ. ನಂದೀಶ್, ಪರಶುರಾಮ್, ಕಾಂತರಾಜ್, ವೆಂಕಟೇಶ್, ಕೆಪಿಎಂ ಗಣೇಶಯ್ಯ, ವೀರೇಶ್, ರಂಗಸ್ವಾಮಿ, ಹೇಮಲತಾ, ವಿನಾಯಕ, ಅನುಸೂಯ, ರುಕ್ಮಿಣಿ, ಸುರಯ್ಯ, ಅಭಿಷೇಕ್, ಶರಣ್ ಮತ್ತಿತರ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ಗಣ್ಯರು ಇದ್ದರು.
ಎಂ.ಜೆ. ಕೋಕಿಲಾ ಪ್ರಾರ್ಥಿಸಿದರು. ಟಿ.ವೀರಭದ್ರಸ್ವಾಮಿ ಸ್ವಾಗತಿಸಿ, ಎಂ.ಟಿ. ಮುರುಳಿ ವಂದಿಸಿದರು. ವಿಮಲಾಕ್ಷಿ ನಿರೂಪಿಸಿದರು.