

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯ ಸಸಾಮಾನ್ಯ ಸಭೆ ಯಲ್ಲಿ ಇನ್ನು ಮುಂದೆ ವಿಧಾನಸಭೆ ಕಲಾಪದಲ್ಲಿ ಮಾರ್ಷಲಗಳು ಕಾರ್ಯನಿರ್ವಹಿಸದಂತೆ ಇಲ್ಲಿಯೂ ಮಾರ್ಷಲ್‌ಗಳು ಕಲಾಪ ನಿರ್ವಹಿಸಲಿದ್ದಾರೆ.
ಹೌದು. ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಇಲ್ಲಿ ಎಂಟು ಜನ ಮಹಿಳೆಯರು ಹಾಗೂ ೧೦ ಜನ ಪುರುಷ ಮಾರ್ಷಲ್‌ಗಳನ್ನು ಪಾಲಿಕೆ ಕಲಾಪ ನಿರ್ವಹಣೆಗೆ ನೇಮಿಸಿಕೊಳ್ಳಲಾಗಿದೆ.
ಸುಗಮ ಕಲಾಪದ ನಡೆಸಲು ಮಾರ್ಷಲ್‌ಗಳು ಅಗತ್ಯವಾಗಿ ಬೇಕು. ಪಾಲಿಕೆ ಸದಸ್ಯರಿಗೆ ಕಲಾಪದ ವೇಳೆ ಅಗತ್ಯ ದಾಖಲೆಗಳನ್ನು ಪೂರೈಕೆ ಮಾಡುವುದು, ಕಲಾಪದಲ್ಲಿ ಗಲಾಟೆಗಳು ಸಂಭವಿಸಿದಾಗ ಅದನ್ನು ನಿಯರಿಸುವುದು, ಗಲಾಟೆ ಮಾಡುವ ಸದಸ್ಯರನ್ನು ಹೊರಗೆ ಹಾಕುವುದು ಸೇರಿದಂತೆ ಮೇಯರ್ ಮತ್ತು ಉಪ ಮೇಯರ್ ಅವರು ನೀಡುವ ಆದೇಶಗಳನ್ನು ಇವರು ಪಾಲನೆ ಮಾಡುತ್ತಾರೆ.
ಅಂದಹಾಗೆ ರಾಜ್ಯದಲ್ಲಿ ಮಹಾನಗರ ಪಾಲಿಕೆಗೆ ಈ ರೀತಿ ಮಾರ್ಷಲ್‌ಗಳನ್ನುಮಹಾನಗರ ಪಾಲಿಕೆಯೊಂದು ಇದೇ ಮೊದಲ ಬಾರಿಗ ನೇಮಕ ಮಾಡಿದ್ದು ವಿಶೇಷ
ಪಾಲಿಕೆ ಅಧಿಕಾರಿಗಳಾದ ಶಂಕರಾನಂದ ಬನಶಂಕರಿ ಸೇರಿದಂತೆ ಹಿರಿಯ ಅಧಿಕಾರಿಗಳು ಮಾರ್ಷಲಗಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗುತ್ತವೆ. ಜನಸಮಾನ್ಯರಿಗೆ ಅಗತ್ಯವಾದ ಸೇವೆ ಪೂರೈಸಲು ಇಲ್ಲಿನ ನಿರ್ಧಾರಗಳಿಗೆ ಮಹತ್ವ ಇರುತ್ತದೆ. ಹೀಗಾಗಿ ಸುಗಮ ಕಲಾಪ ನಡೆಸಲು ಮಾರ್ಷಲಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದ್ದಾರೆ.