ಸಿಡಿಲು ಬಡಿದು ಒಬ್ಬ ಸಾವು, ಇಬ್ಬರಿಗೆ ಗಾಯ

Lightning F
Published on

ನೇಸರಗಿ: ಸಮೀಪದ ಸುತಗಟ್ಟಿ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟು, ಇಬ್ಬರಿಗೆ ಗಾಯವಾದ ಟನೆ ನಡೆದಿದೆ. ಗ್ರಾಮದ ಬಸವರಾಜ ನಾಗಪ್ಪ ಸಂಗೊಳ್ಳಿ (42) ಮೃತ. ಆತನ ಪತ್ನಿ ಸಾವಿತ್ರಿ, ಪುತ್ರಿ ಹರ್ಷಿತಾ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ತಮ್ಮ ಜಮೀನಿನಿಂದ ಕೆಲಸ ಮುಗಿಸಿ ಮನೆ ಬರುತ್ತಿರುವಾಗ ಸಿಡಿಲು ಬಡಿದಿದೆ. ಬೈಲಹೊಂಗಲ ತಹಸೀಲ್ದಾರ್​ ಹಣಮಂತ ಶಿರಹಟ್ಟಿ, ನೇಸರಗಿ ಪಿಎಸ್​ಐ ಈರಪ್ಪ ರಿತ್ತಿ, ಮುಖ್ಯ ಪೇದೆ ಎಂ.ಎಸ್​.ನ್ಯಾಮಗೌಡ್ರ, ಗ್ರಾಮ ಆಡಳಿತ ಅಧಿಕಾರಿ ರಮೇಶ ಶೀಗಿಹಳ್ಳಿ ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net