22 ರಂದು ಮನೆಗಳಲ್ಲಿ ದೀಪ ಬೆಳಗಿಸಿ

Light lamps in houses on 22nd
ಇಂಡಿ ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ವಿವೇಕ ಬಳಗದ ವತಿಯಿಂದ ರಾಮ ರಕ್ಷಾ ಪಠಣ ದೀಪವನ್ನು ಪೂಜೆ ಸಲ್ಲಿಸಲಾಯಿತು. ಬಿ.ಕೆ.ಯಮುನಾ ಅಕ್ಕ, ವಿದ್ಯಾಶ್ರೀ ಪಾಟೀಲ ಇದ್ದರು.
Published on

ಇಂಡಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂದಿದ್ದ ರಾಮ ರಕ್ಷಾಪಠಣ ದೀಪವನ್ನು ಪಟ್ಟಣದಲ್ಲಿ ಭಾನುವಾರ ವಿವೇಕ ಬಳಗದ ನೇತೃತ್ವದಲ್ಲಿ ರಾಮಭಕ್ತರು ಪ್ರತಿ ಮನೆಗೆ ತೆರಳಿ ಶ್ರದ್ಧೆ ಭಕ್ತಿಯಿಂದ ವಿತರಿಸಿ ಭಕ್ತಿ ಭಾವ ಮೆರೆದರು.

ಪಟ್ಟಣದ ಓಂ ಶಾಂತಿ ಆಶ್ರಮದಲ್ಲಿ ವಿವೇಕ ಬಳಗದ ವತಿಯಿಂದ ಪೂಜೆ ಸಲ್ಲಿಸಿ, ಜೈ ಶ್ರೀರಾಮ ಘೋಷಣೆ ಮೊಳಗಿಸಿ, ರಾಮನ ಭಾವಚಿತ್ರ ಹಾಗೂ ರಾಮರಕ್ಷಾ ಪಠಣ ದೀಪ ಹಂಚಿಕೆ ಮಾಡಿದರು.

ವಿದ್ಯಾಶ್ರೀ ಪಾಟೀಲ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಅಗುತ್ತಿರುವುದು ಇಡೀ ದೇಶ ಸಂತಸಪಡುವ ವಿಷಯವಾಗಿದೆ.ಮ ರಕ್ಷಾಪಠಣ ದೀಪ ಪ್ರತಿಯೊಂದು ಮನೆಯಲ್ಲಿ ಬೆಳಗಲಿ.

ಐನೂರು ವರ್ಷಗಳಿಂದ ಇದ್ದ ರಾಮ ಮಂದಿರದ ನಿರ್ಮಾಣದ ಕನಸು ಸದ್ಯ ನನಸಾಗುತ್ತಿದೆ. ಇದರಲ್ಲಿ ರಾಜಕೀಯ ಮಾಡದೆ ಸಮಸ್ತ ಹಿಂದು ಬಾಂಧವರು ಜ. 22ರಂದು ಪ್ರತಿ ಮನೆಗಳಲ್ಲಿ ರಾಮ ದೀಪ ಪ್ರಜ್ವಲಿಸಿ ಗೌರವ ಸಲ್ಲಿಸುವ ಕಾರ್ಯ ಮಾಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ.ಕೆ. ಯಮುನಾ ಅಕ್ಕ, ದ್ರಾಕ್ಷಾಯಣಿ ಅಕ್ಕ, ಉಮಾ ಪಟ್ಟದಕಲ್ಲ, ಸಂಗಾ ಸಿಸ್ಟರ್ ಹಾಗೂ ವಿವೇಕ ಬಳಗದ ಮಾತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net