

ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಉಪ್ಪುಂದ, ಗಂಗೊಳ್ಳಿ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಆಶ್ರಯದಲ್ಲಿ ಶನಿವಾರ ಉಪ್ಪುಂದದಲ್ಲಿ ನಾಡದೋಣಿ ಮೀನುಗಾರರ ಸಭೆ ನಡೆಯಿತು.
ಮಂಗಳೂರಿನಿಂದ ಕಾರವಾರದ ತನಕ ಇರುವ ನಾಡದೋಣಿ ಮೀನುಗಾರರ ಮುಖಂಡರು ಭಾಗವಹಿಸಿದ್ದು, ಮೀನುಮರಿ ಸಂತತಿ ನಾಶವಾಗುವಂಥ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‌ಟ್ರಾಲ್, ಬೆಳಕು ಮೀನುಗಾರಿಕೆ ನಿಷೇಧ ಮಾಡಬೇಕೆಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.
ಮಧ್ಯಾಹ್ನ ಭಟ್ಕಳ ತಾಲೂಕು ಕಚೇರಿಯಲ್ಲಿ ಮೀನುಗಾರಿಕಾ ಸಚಿವ ಎಸ್.ಮಂಕಾಳ ವೈದ್ಯ ಅವರನ್ನು ಭೇಟಿಮಾಡಿ ಮೀನುಮರಿ ಸಂತತಿಗಳು ನಾಶವಾಗುವಂತಹ ಅವೈಜ್ಞ್ಞಾನಿಕ ಮೀನುಗಾರಿಕೆ ನಿಷೇಧ ಮಾಡಬೇಕೆಂಬ ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ಒಂದು ತಿಂಗಳೊಳಗೆ ಈ ವಿಚಾರಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು, ಎಲ್ಲ ಮೀನುಗಾರರ ಸಂಘಟನೆ ಮುಖಂಡರನ್ನು ಕರೆಸಿ ಸಭೆ ನಡೆಸಿ ಸೂಕ್ತ ಪರಿಹಾರ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ನಾಗೇಶ್ ಖಾರ್ವಿ, ಗೌರವಾಧ್ಯಕ್ಷರಾದ ಎಸ್.ಮದನ್ ಕುಮಾರ್ ಉಪ್ಪುಂದ, ನವೀನ್‌ಚಂದ್ರ ಉಪ್ಪುಂದ, ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಯಶವಂತ ಖಾರ್ವಿ, ದಕ್ಷಿಣ ಕನ್ನಡ ಮಂಗಳೂರು ನಾಡದೋಣಿ ಮೀನುಗಾರರ ಮುಖಂಡರಾದ ವಸಂತ ಖಾರ್ವಿ, ಅಶ್ವಥ್ ಕಾಂಚನ್, ಯಾದವ ಸಾಲಿಯಾನ್, ಉದಯ ಅಮೀನ್, ಹೆಜಮಾಡಿ ನಾಡದೋಣಿ ಮೀನುಗಾರರ ಮುಖಂಡ ಏಕನಾಥ್ ಕರ್ಕೇರ್, ಮುಕುಂದ ಕುಂದರ್, ಉತ್ತರ ಕನ್ನಡ ನಾಡದೋಣಿ ಮೀನುಗಾರರ ಮುಖಂಡ ನಾಗರಾಜ ಮಂಜುನಾಥ ಖಾರ್ವಿ, ಅಣ್ಣಪ್ಪ ಸೋಮ ಖಾರ್ವಿ, ಸೋಮನಾಥ ಮೊಗೇರ, ನಾಗರಾಜ ಹರಿಕಾಂತ್, ಬಲಿಂದ್ರ ಅಳ್ವೆಗೆದ್ದೆ ಶಿರೂರು, ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಮುಖಂಡ ಗಂಗೊಳ್ಳಿ ಅಬ್ದುಲ್ ಅಜೀದ್, ಮರವಂತೆ ಮೀನುಗಾರರ ಮುಖಂಡ ಸುರೇಶ್ ಖಾರ್ವಿ, ವಾಸುದೇವ ಖಾರ್ವಿ, ಶಂಕರ ಎಂ.ಖಾರ್ವಿ, ಶೇಖರ್ ಟಿ.ಖಾರ್ವಿ, ಉಪ್ಪುಂದ ಮೀನುಗಾರರ ಮುಖಂಡ ವೆಂಕಟರಮಣ ಖಾರ್ವಿ, ತಿಮ್ಮಪ್ಪ ಖಾರ್ವಿ, ಬಿ.ರಾಮ ಖಾರ್ವಿ, ನಾಗೇಶ ಖಾರ್ವಿ ಮೆಡಿಕಲ್, ಮಂಜುನಾಥ ಜಿ.ಖಾರ್ವಿ, ಸುಧಾಕರ ಖಾರ್ವಿ, ಮಹೇಶ್ ನಾವುಂದ ಇದ್ದರು.