

ಮುದ್ದೇಬಿಹಾಳ: ಮನುಷ್ಯನ ವಾಸಕ್ಕಿರುವುದು ಒಂದೇ ಭೂಮಿ. ನಮ್ಮ ಸ್ವಯಂಕೃತ ಅಪರಾಧಗಳಿಂದ ಭೂಮಿಯ ಪರಿಸರ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಕನ್ನಡ ಕಾನ್ವೆಂಟ್ ಶಾಲೆ ಕಾರ್ಯದರ್ಶಿ ಬಿ.ಎಸ್.ಮೇಟಿ ಹೇಳಿದರು.
ಪಟ್ಟಣದ ಸಂತ ಕನಕದಾಸ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗದಿಂದ ಶನಿವಾರ ಆಯೋಜಿಸಿದ್ದ ದೀಪಾವಳಿ ಹಬ್ಬಕ್ಕೆ ಪಟಾಕಿ ಬೇಡ&ದೀಪ ಬೆಳಗೋಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಪಟಾಕಿ ಸಿಡಿಸದೆ ದೀಪ ಬೆಳಗಿ ಆಚರಿಸಬೇಕು ಎಂದರು.
ಬಳಗದ ಅಧ್ಯ ಡಾ.ವೀರೇಶ ಇಟಗಿ ಮಾತನಾಡಿ, ದೊಡ್ಡ ಶಬ್ದ ಹೊರಡಿಸುವ ಪಟಾಕಿಗಳಿಂದ ಪ್ರಾಣಿ, ಪ ಮಾತ್ರವಲ್ಲದೆ ಮನುಷ್ಯರಿಗೂ ತೊಂದರೆ. ಅದರಿಂದ ಹೊರಹೊಮ್ಮುವ ವಿಷಾನಿಲಗಳಿಂದ ಶ್ವಾಸಕೋಶ, ಕಣ್ಣು ಸೇರಿ ದೇಹದ ಭಾಗಗಳು ಗಂಭೀರ ಖಾಯಿಲೆಗೆ ತುತ್ತಾಗಬೇಕಾಗುತ್ತವೆ ಎಂದರು.
ಬಳಗದ ಸಂಚಾಲಕ ಎಂ.ಎಸ್.ಗಡೇದ ಮಾತನಾಡಿ, ಪಟಾಕಿ ಸಿಡಿಸುವುದು ಶ್ರಮಪಟ್ಟು ದುಡಿದ ಹಣಕ್ಕೆ ಬೆಂಕಿ ಹಚ್ಚುವುದಕ್ಕೆ ಸಮ ಎಂದರು.
ತಾಲೂಕು ಕುರುಬರ ಸಂದ ನಿರ್ದೇಶಕ ನಾಗಪ್ಪ ರೂಢಗಿ, ಬಳಗದ ಮಾಜಿ ಅಧ್ಯರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯ ಬಸವರಾಜ ಬಿಜ್ಜೂರ, ವೀರಶೆವ ಮಹಾಸಭಾ ಅಧ್ಯ ವೆಂಕನಗೌಡ ಪಾಟೀಲ, ಎಂ.ಎಸ್.ಗೌಡರ, ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ಮುಖ್ಯಾಧ್ಯಾಪಕ ಬಿ.ಎಸ್.ಣೇದಕಟ್ಟಿ, ಶಿಕರಾದ ಆರ್.ಜಿ.ಮೆಣಸಗಿ, ಎಸ್.ಎನ್.ಸಜ್ಜನ, ಆರ್.ವೈ.ಪಾಟೀಲ, ಆರ್.ಎಸ್.ವಾಲಿಕಾರ, ಲಕ್ಷಿ$್ಮ ಗುಬಚಿ, ಲತಾ ಮೇಟಿ, ಬಸಮ್ಮ ಬರದೇನಾಳ, ಜಿ.ಎಂ.ಹುಲಗಣ್ಣಿ ಇದ್ದರು.
ಮಾಣಿಕ್ಯಮ್ಮ ತಡಸದ ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎಂ.ಎನ್.ಯರಝರಿ ಸ್ವಾಗತಿಸಿದರು. ಎಂ.ಸಿ.ಕಬಾಡೆ, ಗೋಪಾಲ ಹೂಗಾರ ನಿರ್ವಹಿಸಿದರು.