

ಮೈಸೂರು: ಬೆಳವಾಡಿಯಲ್ಲಿರುವ ಸೈನಿಕ ಅಕಾಡೆಮಿಯಲ್ಲಿ ಫುಲ್ವಾಮಾ ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಲಾಯಿತು.
ಸೈನಿಕ ಅಕಾಡೆಮಿ ಸಂಸ್ಥಾಪಕ ಸಿ.ಎಂ.ಶ್ರೀಧರ ಮಾತನಾಡಿ, ಪಾಕಿಸ್ತಾನಿ ಭಯೋತ್ಪಾದಕರ ಕುತಂತ್ರದಿಂದ ನಮ್ಮ ವೀರ ಸೈನಿಕರನ್ನು ಕಳೆದುಕೊಂಡಿರುವುದು ದೇಶಕ್ಕೆ ದೊಡ್ಡ ನಷ್ಟವಾಗಿದೆ. ಇಂತಹ ಭಯೋತ್ಪಾದಕರನ್ನು ಸದೆ ಬಡಿಯಬೇಕೆಂದರೆ ಪ್ರತಿಯೊಂದು ಕುಟುಂಬದಲ್ಲಿ ಒಬ್ಬ ಸೈನಿಕ ಇರಬೇಕು ಅದಕ್ಕೆ ಅಗ್ನಿವೀರ್ 4 ವರ್ಷ ಯೋಜನೆ ಅನುಕೂಲವಾಗಿದೆ ಎಂದರು.
ಮುಂದೊಂದು ದಿನ ಈ ಯೋಜನೆಯಿಂದ ಮನೆಯಲೊಬ್ಬ ಸೈನಿಕ ಇರುತ್ತಾನೆ. ಇದರಿಂದ ಗುಂಡಾಗಿರಿ, ದುಶ್ಚಟ, ಮೋಸ, ವಂಚನೆ, ವಿಂಗಡಣೆ, ಭ್ರಷ್ಟಾಚಾರ, ಸೋಂಬೇರಿತನ ಎಲ್ಲವು ಕಡಿಮೆ ಆಗುತ್ತದೆ. ಜತೆಗೆ ನಿವೃತ್ತಿಯ ನಂತರವೂ ನಮ್ಮ ಸೇನೆಯ ಬೆನ್ನೆಲುಬು ಆಗಿ ನಮ್ಮ ಅಗ್ನಿವೀರರು ಇರುತ್ತಾರೆ. ನಮ್ಮ ದೇಶ ಬಲಿಷ್ಠವಾದ ದೇಶ ಆಗುತ್ತದೆ ಎಂದರು.
ನಾಲ್ಕನೇ ತರಗತಿ ಅಭ್ಯರ್ಥಿ ಶಾಶ್ವಿತ್ ಹುತಾತ್ಮ ಪುಲ್ವಾಮ ಘಟನೆ, ಸೈನಿಕರ ಬಗ್ಗೆ ಮಾತನಾಡಿದ. ಮುಖಂಡರಾದ ಮಹೇಶ್, ಸತೀಶ್ ಇತರರು ಇದ್ದರು.