

ಕಂಪ್ಲಿ: ತಾಲೂಕಿನ ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 2.52ಕೋಟಿ ರೂ. ವೆಚ್ಚದಲ್ಲಿ ರಾಮಸಾಗರದಿಂದ ಕಣವಿ ತಿಮ್ಮಲಾಪುರ ರಸ್ತೆ ಅಭಿವೃದ್ಧಿ, ಅರಳಿಹಳ್ಳಿ ತಾಂಡಾದ ಸಕಿಪ್ರಾ ಶಾಲಾವರಣದಲ್ಲಿ 19ಲಕ್ಷ ರೂ. ವೆಚ್ಚದಲ್ಲಿ 2ಕೊಠಡಿ ದುರಸ್ತಿ, ಒಂದು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ: ರಸ್ತೆಗಳ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಅನುದಾನ
ನಂತರ ಮಾತನಾಡಿ, ನೀರಾವರಿ ಯೋಜನೆಯಡಿ 140ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ ಹಿರೇಕೆರೆ ತುಂಬಿಸುವುದು, ಶಂಕರ್‌ಸಿಂಗ್‌ಕ್ಯಾಂಪ್‌ನ ಎಂ1 ವಿತರಣಾನಾಲೆ, ಶ್ರೀಧರಗಡ್ಡೆ, ದಮ್ಮೂರು ನಾಲೆಗಳಿಗೆ ಏತನೀರಾವರಿ ಮೂಲಕ ನೀರು ಒದಗಿಸಲು ಅನುದಾನ ಮಂಜೂರಾಗಿದೆ. ರೈತರ ಭೂಮಿಗಳಿಗೆ ನೀರೊದಗಿಸಲು ಕ್ರಮಕೈಗೊಳ್ಳಲಾಗುವುದು.
ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಕ್ಕೆ ಬಿಇಒ ಸೇರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ತಾಲೂಕಿನ 12ಪ್ರೌಢಶಾಲೆ ಉನ್ನತೀಕರಿಸಲಿದ್ದು ಅದರಲ್ಲಿ ಇಟಗಿಯ ಸಹಿಪ್ರಾ ಶಾಲೆಯೂ ಸೇರಿದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷ ಸಚಿವಸ್ಥಾನ ನೀಡಿದಲ್ಲಿ ನಿರ್ವಹಿಸುತ್ತೇನೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ರುದ್ರಪ್ಪ, ಮುಖ್ಯಶಿಕ್ಷಕ ಎಫ್.ಇಮಾಂಸಾಬ್, ಪ್ರಮುಖರಾದ ಹಬೀಬ್‌ರೆಹಮಾನ್, ಸಿ.ಆರ್.ಹನುಮಂತಪ್ಪ, ಬಿ.ನಾರಾಯಣಪ್ಪ, ಆರ್.ಕೆ.ಗವಿಸಿದ್ದಪ್ಪ, ನಿಂಗಪ್ಪ, ಶಂಕ್ರಪ್ಪ, ನಾಗನಗೌಡ, ಯು.ಪಕ್ಕೀರಪ್ಪ, ಗಾದಿಲಿಂಗಪ್ಪ, ವೀರೇಶಪ್ಪ, ಟಿ.ರಾಮಣ್ಣ, ಗುತ್ತಿಗೆದಾರರಾದ ಮಂಜುನಾಥ, ಎಚ್.ತಿಪ್ಪೇಸ್ವಾಮಿ ಇತರರಿದ್ದರು.