ಲೈಫ್ ಸ್ಟೈಲ್ ಎಕ್ಸಪೋಗೆ ಅದ್ಬುತ್ ಸ್ಪಂದನೆ

Expo-2.jpg
Published on

ಹುಬ್ಬಳ್ಳಿ: ಫುಡ್ ಫ್ಯಾಷನ್ ಟ್ರೆಂಡ್ಸ್ ಪ್ರಾಯೋಜಕತ್ವ ಮತ್ತು ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಮಾಧ್ಯಮ ಸಹಯೋಗದಲ್ಲಿ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಲೈಫ್ ಸ್ಟೈಲ್ ಎಕ್ಸಪೋಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಇಲ್ಲಿಯ ಗೋಕುಲ ರಸ್ತೆ ಫೆರ್ನ್ ರೆಸಿಡೆನ್ಸಿಯಲ್ಲಿ ಏರ್ಪಡಿಸಿರುವ ರಾಖಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಪ್ರದರ್ಶನ ಇದಾಗಿದೆ.

ಇಲ್ಲಿ ಮಹಿಳೆಯರಿಗೆ ಕ್ಲಾಥಿಂಗ್, ಜುವೆಲ್ಲರಿ, ಪರ್ಲ್ಸ್, ಬ್ಯಾಗ್, ಪುರುಷರಿಗೆ ಪರ್ಪ್ಯೂಮ್, ಮಕ್ಕಳಿಗಾಗಿ ಗಿಫ್ಟ ಐಟೆಮ್ಸ್, ಸ್ಟೇಶನರೀಸ್, ಪ್ಯಾಕ್ಡ ಫುಡ್ ಇತ್ಯಾದಿಗಳು ಒಂದೇ ಸೂರಿನಡಿ ಸಿಗುತ್ತಿದ್ದು, ಗ್ರಾಹಕರ ಕಣ್ಮನ ಸೆಳೆಯುತ್ತಿವೆ.

ಶನಿವಾರ ಹಾಗೂ ಭಾನುವಾರ ಎರಡು ದಿನ ಎಕ್ಸಪೋ ನಡೆಯಲಿದೆ. 32ಕ್ಕೂ ಅಧಿಕ ಸ್ಟಾಲ್ ಗಳಲ್ಲಿ ತರಹೇವಾರಿ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಭಾನುವಾರ ಒಂದೇ ದಿನ ಬಾಕಿ ಇದೆ. ತಕ್ಷಣ ಭೇಟಿ ಕೊಡಿ ಎಂದು ಸಂಘಟಕರು ಮನವಿ ಮಾಡಿದ್ದಾರೆ.

ಎಕ್ಸಪೋಕ್ಕೆ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನೂರಾರು ಮಹಿಳೆಯರು, ಮಕ್ಕಳು, ಪುರುಷರು ಭೇಟಿ ನೀಡಿ ಶಾಪಿಂಗ್ ನ ಹೊಸ ಅನುಭವ ಪಡೆದರು.

ಭಾರತೀಯರ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಪ್ರದರ್ಶನವನ್ನು ವೀಕೆಂಡ್ ನಲ್ಲಿ ಹಮ್ಮಿಕೊಂಡಿರುವುದರಿಂದ ಹೆಚ್ಚು ಆಕರ್ಷಣೀಯವಾಗಿದೆ. ಮನೆ ಮಂದಿಯೆಲ್ಲ ಸೇರಿ ಇಲ್ಲಿಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net