

ವಿಜಯಪುರ: ಭಾರತದಲ್ಲಿ ತಾಯಂದಿರ ದಿನವು ಸಾಂಸತಿಕ ಮಹತ್ವ ಹೊಂದಿದ್ದು, ಸಾಂಪ್ರದಾಯಿಕ ಮೌಲ್ಯಗಳಲ್ಲಿ ಆಳವಾಗಿ ಬೇರೂರಿದೆ. ತಾಯಂದಿರು ತಮ್ಮ ಕುಟುಂಬಕ್ಕಾಗಿ ಮಾಡುವ ನಿಸ್ವಾರ್ಥ ತ್ಯಾಗವನ್ನು ಗುರುತಿಸಿ ಗೌರವಿಸುವ ದಿನ ಇದಾಗಿದೆ ಎಂದು ಭುವನೇಶ್ವರಿ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಭಾನುವಾರ ನಡೆದ ವಿಶ್ವ ತಾಯಂದಿರ ದಿನ ಉದ್ಘಾಟಿಸಿ ಅವರು ಮಾತನಾಡಿ, ತಾಯಿಯಿಲ್ಲದೆ ಜೀವನವೇ ಶೂನ್ಯ. ತನ್ನ ಮಗುವಿನ ಸಂತೋಷ ಚಿಕ್ಕದಿರಲಿ, ದೊಡ್ಡದಿರಲಿ ತಾಯಿ ಅದರಲ್ಲಿ ಪಾಲ್ಗೊಳ್ಳುತ್ತಾಳೆ.
ಏಕೆಂದರೆ ಮಕ್ಕಳ ಸಂತೋಷವೇ ತನ್ನ ಸಂತೋಷವೆಂದು ಭಾವಿಸುವ ಗುಣ ತಾಯಿಗೆ ಮಾತ್ರ ಇದೆ ಎಂದು ಅವರು ಹೇಳಿದರು.
ಗ್ರಾಮದ ಸುನೀತಾ ಗಿರಿಸಾಗರ ಮಾತನಾಡಿ, ಸಮಾಜ ಮತ್ತು ಕುಟುಂಬದಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ. ಮಗುವಿಗೆ ಮಾತನಾಡಲು, ನಡೆಯಲು ಕಲಿಸುವ ತಾಯಿಯೇ ಮೊದಲ ಗುರು ಎಂದರು.
ಶಿಕಿ ಪ್ರಿಯಾಂಕ ಗಡೇದ ಅಧ್ಯತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ತಾಯಿಗೆ ಬಸವಣ್ಣನವರ ಭಾವಚಿತ್ರ ಕೊಡುಗೆಯಾಗಿ ನೀಡಿದರು.
ಸುನಂದಾ ಬಂಡೆ, ಸುಜಾತಾ ಗಿರಿಸಾಗರ, ಅನುಸೂಯಾ ಸಮಗೊಂಡ, ಮಹಾದೇವಿ ಗಿರಿಸಾಗರ, ಮಕ್ಕಳಾದ ಅನುಶ್ರೀ, ಶ್ರೀನಿಧಿ, ಹರ್ಷ ಮತ್ತಿತರರಿದ್ದರು.