

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬದುಕು ದುಸ್ತರವಾಗಲಿದೆ ಎಂದು ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ಹೇಳಿದರು.
ಅಶ್ವಮೇಧ ಅಭಿವೃದ್ಧಿ ಸಂಘದ ವತಿಯಿಂದ ಅಮರಗೋಳದಲ್ಲಿ ಅಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮನೆಗೆ ಒಂದು ಸಸಿ ನೆಡುವ ಮೂಲಕ ಇಂಥಹ ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಯುವ ಜನಾಂಗ ಪಾಲ್ಗೊಂಡು ಸಮೃದ್ಧ ಸಮಾಜ ಕಟ್ಟಬೇಕೆಂದು ಕರೆ ನೀಡಿದರು.
ಸ್ಥಳೀಯರಾದ ಈಶ್ವರಗೌಡ ಪಾಟೀಲ, ಅಯ್ಯಪ್ಪಗೌಡ ಪಾಟೀಲ, ಪುಂಡಲಿಕ ಕದಂ, ನಿರ್ಮಲಕುಮಾರ ಸಾಬೂಜಿ, ನಜೀರಅಹ್ಮದ ಕೋಲಕಾರ, ಶಿವಸಂಗಯ್ಯಾ ಪಂಚಯ್ಯನಮಠ, ಮಹಾದೇವ ಅಂಗಡಿ, ಸಿದ್ಧಲಿಂಗಯ್ಯ ನರೆಗಲ್ವುಠ, ಹನುಮಂತ ಚಪ್ಪರಮನಿ, ಇತರರು ಇದ್ದರು.