

ಹುಬ್ಬಳ್ಳಿ: ಇಲ್ಲಿಯ ಡಾ.ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ಕಾಲೇಜ್‌ನಲ್ಲಿ ಶನಿವಾರ 538ನೇ ಕನಕದಾಸ ಜಯಂತ್ಯುತ್ಸವ ಆಚರಿಸಲಾಯಿತು.
ಪ್ರಾಂಶುಪಾಲ ರಾಮ್‌ಮೋಹನ್ ಎಚ್.ಕೆ. ಮಾತನಾಡಿ, ದಾಸ ಶ್ರೇಷ್ಠ ಕನಕದಾಸರ ಕೀರ್ತನೆಯ ಅತ್ಯಂತ ಮಹತ್ವ ಹೊಂದಿವೆ. ಲೌಕಿಕ ಮತ್ತು ಅಲೌಕಿಕ ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ದಾಸರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ದ್ಯಾಮಣ್ಣ ಚೌಡಾಳ, ಕನಕದಾಸರ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.
ಉಪ ಪ್ರಾಚಾರ್ಯ ರಮೇಶ ಹೊಂಬಾಳಿ, ಉಪನ್ಯಾಸಕ ಮಹೇಶ ಮಾಳಿ ಇತರರು ಇದ್ದರು.