ಬದುಕಿನ ಮೌಲ್ಯ ಹೆಚ್ಚಿಸುವ ದಾಸ ಸಾಹಿತ್ಯ

25Jaggu10
ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎನ್.ಜಿ. ಲೋಕೂರ ದತ್ತಿನಿಧಿ ದಾಸರ ಪದಗಳ ಸ್ಫರ್ಧೆಯನ್ನು ಎಸ್.ಎಂ. ಕುಲಕರ್ಣಿ ಉದ್ಘಾಟಿಸಿದರು. ನೀರಜಾ ಗಣಾಚಾರಿ, ಎನ್.ಬಿ. ದೇಶಪಾಂಡೆ, ಮೋಹನ ಗುಂಡ್ಲೂರ, ರಾಮಚಂದ್ರ ಕಟ್ಟಿ, ಮಧುಕರ ಗುಂಡೇನಟ್ಟಿ ಉಪಸ್ಥಿತರಿದ್ದರು.
Published on

ಬೆಳಗಾವಿ: ದಾಸ ಸಾಹಿತ್ಯವು ಬದುಕಿನ ಮೌಲ್ಯ ಹೆಚ್ಚಿಸುತ್ತದೆ. ಬದುಕುವ ದಾರಿ ಹೇಳಿಕೊಡು ತ್ತದೆ ಎಂದು ವಕೀಲ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಕುಲಕರ್ಣಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಎನ್.ಜಿ. ಲೋಕೂರ ದತ್ತಿನಿಧಿ ದಾಸರ ಪದಗಳ ಸ್ಫರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮೊದಲು ಬೆರಳೆಣಿಕೆಷ್ಟು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದೆರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುತ್ತಿರು ವುದನ್ನು ಗಮನಿಸಿದಾಗ ಮಕ್ಕಳ ಒಲವನ್ನು ದಾಸರ ಹಾಡುಗಾರಿಕೆಯತ್ತ ಸೆಳೆಯುವಲ್ಲಿ ಪ್ರತಿಷ್ಠಾನ ಯಶಸ್ವಿಯಾಗಿದೆ ಎಂದರು.

ಅಪೂರ್ವ ಕರಿಕಟ್ಟಿ ಮತ್ತು ವೀಣಾ ಶೆಟ್ಟಿ ತೀರ್ಪುಗಾರರಾಗಿ ಆಗಮಿಸಿದ್ದರು. ವೀಣಾ ಶೆಟ್ಟಿ ಮಾತನಾಡಿ, ಸ್ಪರ್ಧಿಗಳು ರಾಗ, ತಾಳ, ಭಾವ, ಉಚ್ಛಾರ ಎಲ್ಲದರತ್ತ ಹೆಚ್ಚಿನ ಗಮನ ಕೊಡಬೇಕು. ಸಂಗೀತಾಭ್ಯಾಸದೊಂದಿಗೆ ಬೇರೆಯವರ ಸಂಗೀತ ಕೇಳುವುದನ್ನು ರೂಢಿಸಿಕೊಳ್ಳಬೇಕು. ಈ ಸ್ಪರ್ಧೆಯು ನಮ್ಮ ಸನಾತನ ಧರ್ಮ ಉಳಿಸಿ, ಬೆಳೆಸುತ್ತಿರುವುದಲ್ಲದೇ ದಾಸ ಸಾಹಿತ್ಯ ಪ್ರಚಾರ ಪಡಿಸುತ್ತಿರುವ ಪ್ರತಿಷ್ಠಾನದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ದಾಸರ ಪದಗಳ ಗಾಯನ ಸ್ಪರ್ಧೆಯಲ್ಲಿ ಬೆಳಗಾವಿಯ ಗೋಮಟೇಶ ಪ್ರೌಢಶಾಲೆ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ (ಪ್ರಥಮ), ಸೇಂಟ್ ಜೊಸೇಫ್ ಪ್ರೌಢಶಾಲೆ ವಿದ್ಯಾರ್ಥಿನಿ ಅನುಷಾ ದೇಸಾಯಿ (ದ್ವಿತೀಯ), ಜ್ಞಾನಪ್ರಮೋದಿನಿ ಮಂದಿರದ ವಿದ್ಯಾರ್ಥಿನಿ ಧನ್ಯಾ ಪಾಟೀಲ (ತೃತೀಯ) ಸ್ಥಾನ ಪಡೆದರು.

ನೀರಜಾ ಗಣಾಚಾರಿ, ಎನ್.ಬಿ. ದೇಶಪಾಂಡೆ, ಮೋಹನ ಗುಂಡ್ಲೂರ, ರಾಮಚಂದ್ರ ಕಟ್ಟಿ, ಮಧುಕರ ಗುಂಡೇನಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಸಂಜೀವ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net