ಓದಿನಿಂದ ಜೀವನ ಪರಿವರ್ತನೆ

12 SARAG 4
ಸರಗೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮಲದಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಮಹದೇವಸ್ವಾಮಿ ಮಾತನಾಡಿದರು. ಜೆ.ಪರಮೇಶ್, ಕೃಷ್ಣೇಗೌಡ , ಮಧುಚಂದ್ರ, ಶಂಕರ್, ಚಂದ್ರಶೇಖರ ಇತರರು ಇದ್ದರು.
Published on

ಸರಗೂರು: ಓದುವುದು ಜೀವನದ ಮುಖ್ಯ ಉದ್ದೇಶವಾಗಬೇಕು. ಓದಿನಿಂದ ಜೀವನ ಪರಿವರ್ತನೆ ಆಗುತ್ತದೆ ಎಂದು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಮಹದೇವಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯದೊಂದಿಗೆ ಮಂಗಳವಾರ ಆಯೋಜಿಸಿದ್ದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಜನದಿನ ಹಾಗೂ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಗೂರು ಸಮೃದ್ಧಿಯಾದ ತಾಲೂಕು. ಈ ತಾಲೂಕಿನಿಂದ ಹಲವರು ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿದ್ದಾರೆ. ಕೆಎಎಸ್, ಐಎಎಸ್ ಓದುವ ಗುರಿ ಹೊಂದುವ ಮೂಲಕ ಜೀವನದ ದಿಕ್ಕನ್ನು ನಾವು ಗುರುತಿಸಿಕೊಳ್ಳಬೇಕಾಗಿದೆ ಎಂದರು.

ವನಜಲಸಿರಿ ನಾಡು ಪ್ರಸಿದ್ಧ ದೇವಾಲಯಗಳು ಹಾಗೂ ಜಲಾಶಯಗಳು ಹಾಗೂ ಸಮೃದ್ಧಿ ಸಂಪನ್ಮೂಲಗಳನ್ನು ಹೊಂದಿದೆ. ಇಂಥ ತಾಲೂಕಿನ ಇರುವುದು ನಮ್ಮ ಅದೃಷ್ಟ. ಮುಂದಿನ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ವಿದ್ಯಾರ್ಥಿಗಳು ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಉತ್ತಮ ವ್ಯವಸ್ಥೆ ಇದ್ದು, ಸದುಪಯೋಗ ಪಡೆಯಬೇಕು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿಯಿಂದ ಗ್ರಂಥಾಲಯಕ್ಕೆ ಬೇಕಾದ ಸಹಾಯ ಮತ್ತು ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು.

ಎಂಸಿ ತಳಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೆ.ಪರಮೇಶ್ ಮಾತನಾಡಿ, ವಿದ್ಯೆ ಪರಿಶ್ರಮದಿಂದ ಮಾತ್ರ ಗಳಿಸಲು ಸಾಧ್ಯ. ಈಗ ಸರ್ಕಾರದ ಸೌಲಭ್ಯಗಳಿದ್ದು, ಆ ಸೌಲಭ್ಯಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಗ್ರಾಪಂ ಗ್ರಂಥಪಾಲಕರಾದ ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಲೆಕ್ಕಪರಿಶೋಧನೆ ಅಧಿಕಾರಿ ಮಧುಚಂದ್ರ, ಮೈರಾಡ ಪಾನ್ ಅಧಿಕಾರಿ ಶಂಕರ್, ಗ್ರಾಪಂ ಸದಸ್ಯ ಚಂದ್ರಶೇಖರ, ತಾಲೂಕು ಗ್ರಂಥಾಲಯ ಮೇಲ್ವಿಚಾರಕ ಬಿಡಗಲು ಶಿವಣ್ಣ, ವಿವಿಧ ಗ್ರಾಮ ಪಂಚಾಯಿತಿ ಗ್ರಂಥಪಾಲಕರಾದ ಸಾಗರೆ ಸುರೇಶ್, ಹೆಗ್ಗನೂರು ಕೃಷ್ಣಗೌಡ, ಹಂಚೀಪುರ ಶಶಿಕಲಾ, ಕಲ್ಲಂಬಾಳು ಸುರೇಶ್, ಎಂ.ಸಿ.ತಳಲು ಮಹದೇವಸ್ವಾಮಿ, ಬಿ.ಮಟಕರೆ ಕೃಷ್ಣಯ್ಯ, ಕೆ.ಬೆಳತ್ತೂರು ಅಂಕನಾಯಕ, ಮನುಗನಹಳ್ಳಿ ಸ್ವಾಮಿ, ಕೃಷ್ಣ,ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net