ದುಷ್ಕರ್ಮಿಗಳ ಪತ್ತೆಗಾಗಿ ಪ್ರತಿಭಟನೆ

15 MDG-3
Published on

ಮುಂಡರಗಿ: ಜಗದ್ಗುರು ತೋಂಟದಾರ್ಯ ಶಾಖಾಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅವರಿಗೆ ಜೀವ ಬೆದರಿಕೆ ಪತ್ರ ಬರೆದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು ಹಾಗೂ ಶ್ರೀಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಭಕ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುಮಾರು 20 ದಿನಗಳ ಹಿಂದೆ ಜೀವಬೆದರಿಕೆ ಪತ್ರ ಬಂದಿದ್ದು, ಸರ್ಕಾರ ಶೀಘ್ರಗತಿಯಲ್ಲಿ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶ್ರೀಗಳಿಗೆ ಪದೇಪದೆ ಜೀವಬೆದರಿಕೆ ಪತ್ರಗಳು ಬರುತ್ತಿವೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ- ಸಿದ್ಧಾಂತಗಳನ್ನು ಜನರಲ್ಲಿ ಬಿತ್ತರಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ ದೂರ ಮಾಡುವುದರ ಜತೆಗೆ ಸಮಾನತೆ, ಸೌಹಾರ್ದ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹವರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತದೆ. ಮುಂಜಾಗ್ರತಾ ಕ್ರಮ ವಹಿಸಿ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್. ವಿರೂಪಾಕ್ಷಗೌಡ್ರ, ಡಾ.ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅಡಿವೆಪ್ಪ ಚಲವಾದಿ, ತಾಲೂಕು ದಲಿತ ಸಂಘ ಅಧ್ಯಕ್ಷ ಸೋಮಣ್ಣ ಹೈತಾಪುರ, ನಿಸರ್ಗ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಬಸಯ್ಯ ಡಂಬಳಮಠ, ಲಾಲ್‌ಬಹದ್ದೂರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಯಲ್ಲಪ್ಪ ಬೊಮ್ಮಾಯಿ, ಚಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಸತ್ಯಪ್ಪ ಚಲವಾದಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮೆಹಬೂಬ್ ಹವಾಲ್ದಾರ್, ಕೊಟ್ರೇಶ ಅಂಗಡಿ, ಪವನ ಚೋಪ್ರಾ, ಅಶೋಕ ಹುಬ್ಬಳ್ಳಿ, ಎ.ಕೆ. ಮುಲ್ಲಾನವರ, ನಾಗರಾಜ ಹೊಂಬಳಗಟ್ಟಿ, ಪಾಲಾಕ್ಷಿ ಗಣದಿನ್ನಿ, ದೇವು ಹಡಪದ, ರಾಜೇಸಾಬ್ ಬೆಟಗೇರಿ, ನಬಿಸಾಬ ಕೆಲೂರ, ದೇವಪ್ಪ ಚಿಕ್ಕಣ್ಣವರ, ದುರುಗಪ್ಪ ಹರಿಜನ, ಲಕ್ಷ್ಮಣ ತಗಡಿನಮನಿ, ನಿಂಗಪ್ಪ ಹಾಲಿನವರ, ಶಿವು ವಾಲಿಕಾರ, ರೈಮಾನಸಾಬ್ ಮಲ್ಲನಕೇರಿ, ಸದಾಶಿವಯ್ಯ ಕಬ್ಬೂರಮಠ, ನಾಗರಾಜ ಮುಖ್ಯೆ, ಮಂಜುನಾಥ ಕಟ್ಟಿಮನಿ, ಎಂ.ಯು.ಮಕಾಂದಾರ, ಹಸನ್ ಅಳವಂಡಿ, ಬಸವರಾಜ ನರೇಗಲ್ಲ, ಸಿರಾಜ್ ಡಂಬಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net