ಸ್ವಾಮೀಜಿ-ಶಾಸಕರಿಗೂ ಕೊಲೆ ಬೆದರಿಕೆ; ರಕ್ಷಣೆ ಕೋರಿ ಎಸ್​​ಪಿಗೆ ಮನವಿ..

Chithradurga
Published on

ಚಿತ್ರದುರ್ಗ: ಸ್ವಾಮೀಜಿ ಹಾಗೂ ಶಾಸಕರಿಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ರಕ್ಷಣೆ ನೀಡಬೇಕು ಎಂದು ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಚಿತ್ರದುರ್ಗದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರಿಗೆ ರಕ್ಷಣೆ ನೀಡಬೇಕು ಎಂದು ಕೋರಿ ಚಿತ್ರದುರ್ಗ ಎಸ್​ಪಿ ಕೆ. ಪರಶುರಾಮ್ ಅವರ ಬಳಿ ಕೇಳಿಕೊಳ್ಳಲಾಗಿದೆ. ಸಿದ್ದರಾಮೇಶ್ವರ ಸ್ವಾಮೀಜಿ ಮಾತ್ರವಲ್ಲದೆ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೂ ಕೊಲೆ ಬೆದರಿಕೆಯೊಡ್ಡಲಾಗಿದೆ.

KSP ಆ್ಯಪ್ ಮೂಲಕ ನಮ್ಮ ಕಚೇರಿಗೆ ಕೊಲೆ ಬೆದರಿಕೆ ಬಂದಿದೆ. ಶಾಸಕರು ಹಾಗೂ ಭೋವಿ ಸಮುದಾಯದ ಹಲವರ ಹೆಸರುಗಳು ಪ್ರಸ್ತಾಪ ಆಗಿದ್ದು, ಅವರ ಹತ್ಯೆಗೆ ಸಂಚು ಹೂಡಿದ್ದಾಗಿ ತಿಳಿಸಲಾಗಿದೆ. ನಾಲ್ಕು ಮಂದಿ ಹತ್ಯೆ ಸಂಚು ರೂಪಿಸಿದ್ದಾರೆ, ಅವರ ಹೆಸರು ಕೂಡ ಉಲ್ಲೇಖವಾಗಿದೆ ಎಂಬ ದೂರಿನೊಂದಿಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಠದ ಆಸ್ತಿಗಳಿಗೆ ಕೆಲವು ದುಷ್ಕರ್ಮಿಗಳಿಂದ ಅಪಾಯವಿದೆ. ಜುಲೈ 18ಕ್ಕೆ ಬೋವಿ ಜನೋತ್ಸವ ನಡೆಯಲಿದೆ. ಆಗಸ್ಟ್​ 1ರಂದು ಸಿದ್ದರಾಮೇಶ್ವರ ರಥೋತ್ಸವ ಬೃಹತ್ ಆಗಿ ನಡೆಯುತ್ತಿದೆ. ಈ ಕಾರಣದಿಂದ ಯಾವುದೇ ತೊಂದರೆ ಆಗದಂತೆ ಸ್ವಾಮೀಜಿಗೆ ರಕ್ಷಣೆ ನೀಡುವಂತೆ ಎಸ್​​ಪಿ ಕಚೇರಿಗೆ ಬೋವಿ ಗುರುಪೀಠದ ಸಿಇಒ ಗೋವಿಂದಪ್ಪ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net