ಕೊಟ್ಟ ಹಣ ಕೇಳಿದ್ದಕ್ಕೆ ಜೀವ ಬೆದರಿಕೆ

crime
Published on

ಹುಬ್ಬಳ್ಳಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹೊಸ ಮ್ಯಾದಾರ ಓಣಿಯ ವಿನಾಯಕ ಸಾವಂತ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಲಿಯಾಸ್ ಮತ್ತು ಹೆಬ್ಸಿಬ ಎಂಬುವರು ನನಗೆ ಪರಿಚಯಸ್ಥರು. ಮನೆಯಲ್ಲಿ ಅಡಚಣೆಯಾಗಿದೆ ಎಂದು ಕೈಗಡ ಹಾಗೂ ಬ್ಯಾಂಕ್​ನಿಂದ 15.20 ಲಕ್ಷ ರೂ. ಸಾಲ ಮತ್ತು 200 ಗ್ರಾಂ ಬಂಗಾರ ಪಡೆದುಕೊಂಡಿದ್ದರು. ಹಣ ಮತ್ತು ಬಂಗಾರ ವಾಪಸ್ ಕೊಡದೇ ವಂಚಿಸಿದ್ದಾರೆ. ಕೆಲವರನ್ನು ಕರೆದುಕೊಂಡು ಬಂದು ಹಣ ವಾಪಸ್ ಕೇಳಿದರೆ ನನ್ನನ್ನು ಮುಗಿಸಿ ಬಿಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿನಾಯಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net