

ಹುಬ್ಬಳ್ಳಿ: ರಕ್ಷಾ ಬಂಧನ ಅಂಗವಾಗಿ ಎರಡು ದಿನಗಳವರೆಗೆ ನಗರದ ಫೆರ್ನ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಲೈಫ್ ಸ್ಟೈಲ್ ಎಕ್ಸಪೋ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಶನಿವಾರ ಹಾಗೂ ಭಾನುವಾರ ಅನೇಕ ಜನರು ಎಕ್ಸಪೋಕ್ಕೆ ಭೇಟಿ ನೀಡಿ ಹೊಸ ಹೊಸ ವಿನ್ಯಾಸದ ವಸ್ತುಗಳನ್ನು ವೀಕ್ಷಿಸಿ ಖರೀದಿಯನ್ನೂ ಮಾಡಿದರು.
ಫುಡ್ ಫ್ಯಾಷನ್ ಟ್ರೆಂಡ್ಸ್ ಪ್ರಾಯೋಜಕತ್ವ ಮತ್ತು ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಮಾಧ್ಯಮ ಸಹಯೋಗದಲ್ಲಿ ನಡೆದ ಎಕ್ಸಪೋಕ್ಕೆ ಭಾನುವಾರ ಜನಸಾಗರವೇ ಹರಿದು ಬಂತು.
ಮಹಿಳೆಯರ ವೈವಿಧ್ಯಮಯ ಬಟ್ಟೆಗಳು, ರೆಡಿಮೇಡ್ಸ್, ಪರ್ಲ್ ಜುವೆಲ್ಲರಿ, ಬ್ಯಾಗ್, ರ್ಪ್ಯೂಮ್, ಗಿಫ್ಟ ಐಟೆಮ್ಸ್, ಸ್ಟೇಶನರೀಸ ಗಳು ನೋಡುಗರ ಗಮನ ಸೆಳೆದವು.
ನೂರಾರು ಮಹಿಳೆಯರು, ಮಕ್ಕಳು, ಪುರುಷರು ಶಾಪಿಂಗ್ ಮಾಡಿದರು. ಎರಡು ದಿನ ಸಂಭ್ರಮದಿಂದ ನಡೆದ ಎಕ್ಸಪೋಕ್ಕೆ ಭಾನುವಾರ ತೆರೆ ಬಿತ್ತು.