

ಹುಬ್ಬಳ್ಳಿ: ಫುಡ್ ಫ್ಯಾಷನ್ ಟ್ರೆಂಡ್ಸ್ ಹಾಗೂ ಟ್ರು ಪಿಲ್ಸ್ ಜನಾ ಔಷಧಿ ಕೇಂದ್ರದ ಪ್ರಾಯೋಜಕತ್ವ ಮತ್ತು ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಮಾಧ್ಯಮ ಸಹಯೋಗದಲ್ಲಿ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಲೈಫ್ ಸ್ಟೈಲ್ ಎಕ್ಸಪೋ ಸೀಸನ್ 8 ಅನ್ನು ಆಗಸ್ಟ್ 5 ಹಾಗೂ 6ರಂದು ಬೆಳಗ್ಗೆ 11ಕ್ಕೆ ಇಲ್ಲಿಯ ಗೋಕುಲ ರಸ್ತೆ ಫೆರ್ನ್ ರೆಸಿಡೆನ್ಸಿಯಲ್ಲಿ ಏರ್ಪಡಿಸಲಾಗಿದೆ.
ಈ ಪ್ರದರ್ಶನಕ್ಕೆ ಸಾರ್ವಜನಿಕ ಪ್ರವೇಶವು ಸಂರ್ಪೂಣ ಉಚಿತವಾಗಿದೆ. ಭಾರತೀಯರ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಪ್ರದರ್ಶನವನ್ನು ವೀಕೆಂಡ್ನಲ್ಲಿ ಹಮ್ಮಿಕೊಂಡಿರುವುದರಿಂದ ಹೆಚ್ಚು ಆಕರ್ಷಕವಾಗಿದೆ. ಶಾಪಿಂಗ್ ಅನ್ನು ಇನ್ನಷ್ಟು ಮನಮೋಹಕಗೊಳಿಸಲಿದೆ.
ಇಲ್ಲಿ ನೀವು ವಿಶೇಷವಾಗಿ ರಾಖಿ, ಜುವೆಲ್ಲರಿ, ಕ್ಲಾಥಿಂಗ್ ಬ್ಯಾಗ್ಸ್, ಸ್ಯಾಂಡಲ್ಸ್ ಇವೆಲ್ಲವನ್ನು ಒಂದೇ ಸೂರಿನಡಿ ನೋಡಬಹುದು. ಹಾಗಾಗಿ ಮನೆ ಮಂದಿಯೆಲ್ಲ ಸೇರಿ ಇಲ್ಲಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.