ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

13ard04
ಔರಾದ್‌ನ ಆದರ್ಶ ವಿದ್ಯಾಲಯದಲ್ಲಿ ನೂತನ ಜಿಪಿಟಿ ಶಿಕ್ಷಕರಿಗೆ ಶನಿವಾರ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಬಿಇಒ ಟಿ.ಆರ್.ದೊಡ್ಡಿ, ಡಾ.ಶಾಲಿವಾನ ಉದಗೀರೆ, ಡಾ.ಎಚ್.ಬಿ.ಭರಶೆಟ್ಟಿ, ಬಾಬುರಾ ನಿಂಬೂರೆ, ಅನಿಲ ಶಾಸ್ತ್ರೀ, ಬಲಭೀಮ ಕುಲಕರ್ಣಿ, ಧೂಳಪ್ಪ ಮಳೆನೂರ ಇದ್ದರು.
Published on

ಔರಾದ್: ಸಮಾಜದಲ್ಲಿ ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಮಕ್ಕಳ ಮನೋಭಾವಕ್ಕೆ ತಕ್ಕಂತೆ ಬೋಧನೆ ಮಾಡಬೇಕೆಂದು ಬಿಇಒ ಟಿ.ಆರ್.ದೊಡ್ಡೆ ಹೇಳಿದರು.

ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ನೂತನ ಜಿಪಿಟಿ ಶಿಕ್ಷಕರಿಗೆ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಮೇಲೆ ಪಾಲಕರ ಆಸಕ್ತಿ ಕಡಿಮೆ ಆಗಬಾರದು. ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದ್ದು, ಅವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ. ಅವರ ಮಾತುಗಳನ್ನು ಕೇಳುತ್ತಾರೆ. ಆದ್ದರಿಂದ ಶಿಕ್ಷಕರು ಆದರ್ಶ ಗುಣಗಳಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.

ಪ್ರಾಂಶುಪಾಲರಾದ ಡಾ.ಎಚ್.ಬಿ.ಭರಶೆಟ್ಟಿ, ಧೂಳಪ್ಪ ಮಳೆನೂರ, ಸ್ಕೌಟ್ಸ್​ ರಾಜ್ಯ ತರಬೇತಿದಾರ ಬಾಬುರಾ ನಿಂಬೂರೆ, ಅನಿಲ ಶಾಸ್ತ್ರೀ ಮಾತನಾಡಿದರು. ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ, ಡಾ.ಶಾಲಿವಾನ ಉದಗೀರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net