ಸರ್ವಾಂಗೀಣ ಪ್ರಗತಿಗೆ ಜೀವನ ಕೌಶಲ ಮುಖ್ಯ

Published on

ಚಿಕ್ಕಬಳ್ಳಾಪುರ: ಭೂ ಮಂಜೂರಾತಿ ಪ್ರಕರಣಗಳನ್ನು ತ್ವರಿತ ವಿಲೇವಾರಿಗೊಳಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ. .

ಚಿಕ್ಕಬಳ್ಳಾಪುರ ನಗರದಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಭೂ ಮಂಜೂರಾತಿ ಪ್ರಕರಣಗಳಲ್ಲಿ ದರಖಾಸ್ತು ಮತ್ತು ಪೋಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇಗೊಳಿಸುವಾಗ ಸರಳೀಕರಣಗೊಳಿಸಿ, ತಂತ್ರಾAಶದಲ್ಲಿ ದಾಖಲಿಸಬೇಕು. ದುರಸ್ತಿ ಕೆಲಸದಲ್ಲಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಕಳೆದ ಸಾಲಿನ ನ.25 ರಂದು ಸರ್ಕಾರ ಭೂ ಮಂಜೂರಿ ಪ್ರಕರಣಗಳನ್ನು ಇತ್ಯರ್ಥಪಡಿಸಲು, ಸರ್ಕಾರವು ಸುತ್ತೋಲೆ ಹೊರಡಿಸಿದೆ. ಅದರಂತೆ ಸರ್ಕಾರದಿಂದ ಮಂಜೂರಾದ ಜಮೀನು ದರಖಾಸ್ತು ಪೋಡಿಯ ಮಾದರಿಯಲ್ಲಿ ಹೊಸ ಸರ್ವೆ ನಂಬರ್ ನಮೂದಿಸಬೇಕು ಎಂದು ತಿಳಿಸಿದ್ದಾರೆ.

ಭೂದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ತಹಸೀಲ್ದಾರ್ ಸಮ್ಮುಖದಲ್ಲಿ ಹೊಸ ಸರ್ವೆ ನಂಬರ್ ದಾಖಲಿಸಿ, ಪಹಣಿಯನ್ನು ತಂತ್ರಾAಶದಲ್ಲಿ ಮುದ್ರಿಸಿರುವ ಕೆಲಸದ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಡಿ.ಡಿ.ಎಲ್.ಆರ್ ಮಂಜುನಾಥ್ ಥವಣೆ, ತಹಸೀಲ್ದಾರ್ ಅನಿಲ್, ಶಿರಸ್ತೆದಾರ್ ಮಲ್ಲಿಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net