ಸಹೋದರಿ ಕೊಂದವನಿಗೆ ಜೀವಾವಧಿ ಶಿಕ್ಷೆ

Published on

ಬಳ್ಳಾರಿ : ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ಕಾರಣದಿಂದ ಸ್ವಂತ ಅಕ್ಕನನ್ನೇ ಕೊಲೆಗೈದಿದ್ದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಹಾಗೂ ಮೃತ ಸಹೋದರಿ ಪುತ್ರಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ 2ನೇ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರು ತೀರ್ಪು ನೀಡಿ ಆದೇಶಿಸಿದ್ದಾರೆ.

ವಿಧಿಸಿದ ದಂಡ ನೀಡಲು ವಿಫಲವಾದರೆ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ಮೃತ ಪುತ್ರನಿಗೆ ಪರಿಹಾರ ನೀಡಲು ಹಣ ಇಲ್ಲವಾದರೆ ಆಸ್ತಿಯಿಂದ ಹಣ ಹೊಂದಿಸಿ ನೀಡಬೇಕು ಎಂಬುದಾಗಿ ಕೋರ್ಟ್ ತಿಳಿಸಿದೆ.

ಏನಿದು ಪ್ರಕರಣ : ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿ ಆರೋಪಿ ಕೆ.ಜಿ.ವೇಣುಗೋಪಾಲ ವಾಸವಿದ್ದರು. ಅಕ್ಕ, ಮೃತ ಸುನಾಂದ ಕೂಡ ಅದೇ ಮನೆಯಲ್ಲಿದ್ದರು. ಗಂಡನನ್ನು ಬಿಟ್ಟು ಬಂದಿದ್ದ ಆಕೆ ಆಸ್ತಿಯಲ್ಲಿ ಪಾಲು ಕೇಳಿದ್ದರು. ಇದರಿಂದ ಪಾರಾಗಲು ಬಯಸಿದ್ದ ವೇಣುಗೋಪಾಲ 2017 ನ.3ರಂದು ಸ್ವಂತ ಅಕ್ಕನ ಮೇಲೆಯೇ ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿದ್ದ. ತಲೆಗೆ ತೀವ್ರ ಪಟ್ಟಾಗಿದ್ದ ಸುನಂದಾ ಅವರನ್ನು ಬಿಮ್ಸ್‌ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಪ್ರಕರಣದಲ್ಲಿ 16 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಸರ್ಕಾರದ ಪರವಾಗಿ ಲಕ್ಷೀದೇವಿ ಪಾಟೀಲ ವಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net