ಬಳ್ಳಾರಿ : ಕ್ಷುಲಕ ಕಾರಣದಿಂದ ಕೊಲೆಗೈದಿದ್ದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ನೀಡಲು ವಿಫಲವಾದರೆ ಒಂದು ವರ್ಷ ಸಾದಾ ಶಿಕ್ಷೆ ನೀಡಲಾಗಿದೆ ಎಂದು 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಗುಡಿ ವಾಸುದೇವ ರಾಧಕಾಂತ ತೀರ್ಪು ನೀಡಿ ಆದೇಶಿಸಿದ್ದಾರೆ.
ಏನಿದು ಪ್ರಕರಣ : ಇಲ್ಲಿನ ತಿಲಕ್‌ನಗರ ನಿವಾಸಿ, ಮೃತ ರೋಷನ್ ಮದ್ಯ ಸೇವಿಸುವೆ ವೇಳೆ ಆರೋಪಿ ಮುನಿರ್ ಅಹಮದ್‌ಗೆ ಕಪಾಳಕ್ಕೆ ಒಡೆದಿದ್ದಾನೆ. 2023ರ ಜೂ. 29ರಂದು ಬಕ್ರಿದ್ ಹಬ್ಬದಂದು ನಗರದ ಹೊರವಲಯದಲ್ಲಿ ರೋಷನ್ ಸ್ನೇಹಿತರೊಂದಿಗೆ ಅಡುಗೆ ಮಾಡುತ್ತಿದ್ದ ವೇಳೆ ಹಳೆಯ ವೈಷಮ್ಯ ಹಾಗೂ ದ್ವೇಷದಿಂದ ಮುನಿರ್ ಚಾಕುನಿಂದ ಹಲ್ಲೆ ಮಾಡಿದ್ದ. ತೀವ್ರ ಪೆಟ್ಟಾಗಿದ್ದ ರೋಷನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪ್ರಕರಣದಲ್ಲಿ 21 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಸರ್ಕಾರದ ಪರವಾಗಿ ಲಕ್ಷೀದೇವಿ ಪಾಟೀಲ ವಾದಿಸಿದ್ದಾರೆ.
===