ಜೀವ ಕಾಪಾಡುವ ವೈದ್ಯ ವೃತ್ತಿ ಪವಿತ್ರವಾದದು

24blh2 inchal news 2
Published on

ಬೈಲಹೊಂಗಲ: ಜನರ ಪ್ರಾಣ ಕಾಪಾಡುವ ವೈದ್ಯ ವೃತ್ತಿ ಪವಿತ್ರವಾದುದು. ಹೀಗಾಗಿ, ವೈದ್ಯಕಿಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು ಎಂದು ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಿಕಾ ವೈದ್ಯ ವಿದ್ಯಾರ್ಥಿಗಳ ಪದವಿ ದಿನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಶೈಣಿಕ ಶ್ರೇಷ್ಠತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಒತ್ತಡದ ಬದುಕಿನಲ್ಲಿ ರೋಗದಿಂದ ದೂರ ಉಳಿಯಲು ಉತ್ತಮ ಜೀವನ ಕ್ರಮ ರೂಢಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಆಯುರ್ವೇದ ಮಹಾವಿದ್ಯಾಲಯ ಅತ್ಯಾಧುನಿಕ ಸೌಕರ್ಯ ಹಾಗೂ ನುರಿತ ಬೋಧಕ ವರ್ಗ ಹೊಂದಿದೆ. ಸೌಲಭ್ಯ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಬೇಕು ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ.ಸಿ.ಎಂ.ತ್ಯಾಗರಾಜ ಮಾತನಾಡಿದರು.ಆರ್​ಜಿಯುಎಚ್​ಎಸ್​ ಬೆಂಗಳೂರು ಮೇಂಬರ್​ ಆ್​ ಸೆನೆಟ್​ ಡಾ.ಕಿರಣಕುಮಾರ ಕೆ., ಸಂಸ್ಥೆಯ ಮಾಜಿ ಚೇರ್ಮನ್​ರಾದ ಡಿ.ಬಿ.ಮಲ್ಲೂರ, ಎಸ್​.ಎಂ.ರಾಹುತನವರ, ಗೌರವ ಕಾರ್ಯದರ್ಶಿ ಎಸ್​.ಎನ್​.ಕೊಳ್ಳಿ, ಪಿಜಿ ಬಿಒಎಸ್​ ಆಯುರ್ವೇದ ಚೇರ್ಮನ್​ ಡಾ.ಎಸ್​.ಎ.ಪಾಟೀಲ, ಪ್ರಾಚಾರ್ಯ ಡಾ.ಜಿ.ವಿನಯ ಮೋಹನ, ಉಪ ಪ್ರಾಚಾರ್ಯ ಡಾ. ಜಿ.ಎಸ್​.ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net