ಕೆಎಲ್ ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಿಂದ ಜೀವ ರಕ್ಷಣಾ ಕಲೆಗಳ ತರಬೇತಿ

22-Jaggu-8.JPG
Published on

ಬೆಳಗಾವಿ: ಜೀವ ರಕ್ಷಣಾ ಕಲೆಗಳನ್ನು ಪ್ರಸ್ತುತ ಪ್ರತಿಯೊಬ್ಬರೂ ತಿಳಿಯುವುದು ಅಗತ್ಯವಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಹೇಳಿದರು.
 ಚನ್ನಮ್ಮ ನಗರದ ಸಮುದಾಯ ಭವನದಲ್ಲಿ ಶನಿವಾರ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಿಂದ ಚನ್ನಮ್ಮ ನಗರದ ಯೋಗ ಶಾಲೆಯ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ತರಬೇತಿಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ವೈದ್ಯಕೀಯ ತುರ್ತು ಸಂದರ್ಭಗಳು ಪ್ರತಿಯೊಬ್ಬರಿಗೂ ಯಾವಾಗ ಬೇಕಾದರೂ ಎದುರಾಗುವ ಸಂದರ್ಭಗಳು ಬರಬಹುದು. ಹೀಗಾಗಿ ಯೋಗ ಪ್ರಶಿಕ್ಷಣಾರ್ಥಿಗಳಿಗೆ ಜೀವ ರಕ್ಷಣಾ ಕಲೆಯ ಕೌಶಲ ತಿಳಿಸುವುದರಿಂದ ನಾಗರಿಕರಿಗೆ ಆರೋಗ್ಯದ ಅರಿವು, ಕಾಳಜಿ ಜಾಗೃತಿ ಮೂಡಿಸುತ್ತಾರೆ ಎಂದರು.
 ಯೋಗಗುರು ಅರುಣ ಪುಣೆಕರ ಮಾತನಾಡಿ, ಯೋಗಾಭ್ಯಾಸ ಸದೃಢ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು. ವೈದ್ಯಕೀಯ ತುರ್ತು ಸೇವೆ, ಚಿಕಿತ್ಸೆಗಳ ಜ್ಞಾನ ನೀಡುತ್ತಿರುವ ಕೆಎಲ್‌ಇ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
 ಯೋಗಾ ಶಾಲೆ ಪ್ರಮುಖರಾದ ಸುರೇಖಾ ಪುಣೇಕರ, ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಕಡ್ಡಿ, ಮಕ್ಕಳ ತಜ್ಞ ಡಾ. ಸಂತೋಷಕುಮಾರ ಕರಮಸಿ, ಡಾ. ಬಸವರಾಜ ಕುಡಸೋಮಣ್ಣವರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. 60ಕ್ಕೂ ಅಧಿಕ ಜನ ಯೋಗ ವಿದ್ಯಾರ್ಥಿಗಳು, ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net