

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಸುಜ್ಞಾನ ನಿಧಿ ಕಾರ್ಯಕ್ರಮದಡಿ 131 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಮಂಜೂರು ಪತ್ರ, ಜ್ಞಾನದೀಪ ಕಾರ್ಯಕ್ರಮದಡಿ 12 ಶಾಲೆಗಳಿಗೆ ಶಿಕ್ಷಕರನ್ನು ಒದಗಿಸಿ ಮಂಜೂರಾತಿ ಪತ್ರವನ್ನು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯ್ಕ ಅವರಿಗೆ ನೀಡಲಾಯಿತು.
ಭಟ್ಕಳ ಯೋಜನಾ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಬಿಇಒ ಉದ್ಘಾಟಿಸಿ ಮಾತನಾಡಿದರು. ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶ್ರೀ ವೀರೇಂದ್ರ ಹೆಗ್ಗಡೆಯವರು ಶಿಕ್ಷಣ, ಸಮಾಜ ಅಭಿವೃದ್ಧಿಗೆ ಒತ್ತು ನೀಡಿ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುತ್ತಿದ್ದಾರೆ. ಮಹಿಳೆಯರ ಸ್ವಾವಲಂಬನೆ ಬದುಕಿಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ಸಾಕಷ್ಟು ಅನುಕೂಲವಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆ ನಿರ್ದೇಶಕ ಮಹೇಶ್ ಎಂ.ಡಿ., ಪತ್ರಕರ್ತ ವಿಷ್ಣು ದೇವಾಡಿಗ ಮಾತನಾಡಿದರು. ತಾಲೂಕಿನ ಯೊಜನಾಧಿಕಾರಿ ಗಣೆಶ್ ಡಿ.ನಾಯ್ಕ ಸ್ವಾಗತಿಸಿದರು. ಮೇಲ್ವಿಚಾರಕ ಅಶೋಕ್ ಗೌಡ ನಿರೂಪಿಸಿದರು.