ಜೀವನದ ಸಾರ್ಥಕತೆಗೆ ಆಧ್ಯಾತ್ಮ ಅವಶ್ಯ

18 siraguppa 01
ಸಿರಗುಪ್ಪ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾರಾವಿಯಲ್ಲಿ ನಡೆದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಬಸವ ಬಳಗದ ಬಸವ ಭೂಷಣ ಶ್ರೀಗಳು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ವಲಯ ಮೇಲ್ವಿಚಾರಕಿ ಪಿ.ವನಿತಾ ಅಂಗಡಿ, ಕೃಷಿ ಮೇಲ್ವಿಚಾರಕ ಪ್ರಭು ಹಿರೇಮಠ, ಆಂತರಿಕ ಲೆಕ್ಕ ಪರಿಶೋಧಕ ರಾಕೇಶ್ ಇದ್ದರು.
Published on

ಸಿರಗುಪ್ಪ; ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ಹಿನ್ನೆಲೆ ಪ್ರತಿ ತಾಲೂಕಿನಲ್ಲಿ ಧಾರ್ಮಿಕ ಸಭಾ ಆಯೋಜಿಸಿ ಸಾಧು ಸಂತರ ಮೂಲಕ ಆಧ್ಯಾತ್ಮಿಕತೆ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.

ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ರಾರಾವಿಯಲ್ಲಿ ಸೋಮವಾರ ನಡೆದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದರರು.

ಬಸವ ಬಳಗದ ಬಸವ ಭೂಷಣ ಶ್ರೀಗಳು ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದದ್ದು, ಜೀವನದ ಸಾರ್ಥಕತೆಗೆ ಧರ್ಮದ ಹಾದಿಯಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಂಡು ಏಕಾಗ್ರತೆಯಿಂದ ಸಾಗಬೇಕು. ಧರ್ಮ ಜಾಗೃತಿ ಕಾರ್ಯಗಳು ಅವಶ್ಯ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಪಿ.ವನಿತಾ ಅಂಗಡಿ, ಕೃಷಿ ಮೇಲ್ವಿಚಾರಕ ಪ್ರಭು ಹಿರೇಮಠ, ಆಂತರಿಕ ಲೆಕ್ಕ ಪರಿಶೋಧಕ ರಾಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net