ತಾಯಿಯಿಂದ ಬದುಕಿನ ಪಾಠ

MOTHER
Published on

ಮುಂಡರಗಿ: ಜಗತ್ತಿನ ಎಲ್ಲ ದೇವರಿಗಿಂತ ಮೀಗಿಲಾದದ್ದು ತಾಯಿ ದೇವರು. ತಾಯಿಯೇ ಮೊದಲಗುರು. ತಾಯಿಯಿಂದ ಬದುಕಿನ ಪಾಠ ದೊರೆಯುತ್ತದೆ. ಪ್ರತಿಯೊಬ್ಬರು ಶಿಕ್ಷಣವಂತರಾಗಿ ಸಮಾಜದಲ್ಲಿ ಉತ್ತಮ ಮಾನವರಾಗಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಸ್ಥಳೀಯ ಜಗದ್ಗುರು ತೋಂಟದಾರ್ಯ ವಸತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಶಿಕ್ಷಣಕ್ಕೆ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ಶಿಕ್ಷಣ ಕಲಿತ ಮೇಲೆ ಯಾವುದೇ ಗೌರವಾನ್ವಿತ ಹುದ್ದೆಗೆ ಹೋಗಲು ಗುರುವೇ ಮೂಲಕಾರಣ ಎಂದರು.

ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಕೊಟ್ರೇಶ ಅಂಗಡಿ ಮಾತನಾಡಿ, ದೇಶದ ಸನಾತನ ಧರ್ಮಗಳಲ್ಲಿ ಗುರುವಿಗೆ ಅಗ್ರ ಸ್ಥಾನವಿದ್ದು ನಾವು ಕಲಿತ ಒಂದೊಂದು ಅಕ್ಷರವೂ ಗುರುವಿನ ಕರುಣೆ ಎಂದರು.

ಹೇಮಗಿರಿಶ ಹಾವಿನಾಳ, ಈಶ್ವರಪ್ಪ ಬೆಟಗೇರಿ ಇತರರು ಇದ್ದರು. ಪ್ರಾಚಾರ್ಯ ಶರಣಕುಮಾರ ಬುಗಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜನಾ ಹೊಸಮನಿ ಸ್ವಾಗತಿಸಿದರು. ಪೃಥ್ವಿ ದೇಸಾಯಿ ನಿರೂಪಿಸಿದರು. ವಿಕಾಸ ಹೊಸಪೇಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net