ದೇಶದ ಪ್ರಗತಿಗೆ ಕೊಡುಗೆ ನೀಡಿದರೆ ಬದುಕು ಸಾರ್ಥಕ

31-ANP-P1
ಯಡೇಹಳ್ಳಿಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ರವಿಕುಮಾರ್ ಮಾತನಾಡಿದರು. ವಿಕಾಸ, ವೀರೇಶ್, ಶ್ರೀಧರ್, ಜ್ಯೋತಿಶ್ ಇತರರಿದ್ದರು.
Published on

ಆನಂದಪುರ: ಯುವಕರಲ್ಲಿ ರಾಷ್ಟ್ರಾಭಿಮಾನ ಮತ್ತು ಪರಸ್ಪರ ಸಹೋದರ ಮನೋಭಾವ ಮೂಡಬೇಕು ಎಂದು ಯುವ ಮುಖಂಡ ರವಿಕುಮಾರ್ ಎಸ್.ಯಡೇಹಳ್ಳಿ ಹೇಳಿದರು.

ಬುಧವಾರ ಸಮೀಪದ ಯಡೇಹಳ್ಳಿ ಗ್ರಾಮದ ಶ್ರೀ ವರ ಸಿದ್ಧಿವಿನಾಯಕ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಗವದ್ ಧ್ವಜಕ್ಕೆ ವಂದನೆ ಸಲ್ಲಿಸಿ ಮಾತನಾಡಿ, ಗ್ರಾಮ ಹಾಗೂ ಪರೋಕ್ಷವಾಗಿ ದೇಶದ ಪ್ರಗತಿಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದರೆ ಬದುಕು ಸಾರ್ಥಕತೆ ಪಡೆಯಬಲ್ಲದು ಎಂದರು.
ಪ್ರಮುಖರಾದ ವಿಕಾಸ, ವೀರೇಶ್, ಶ್ರೀಧರ್, ಜ್ಯೋತಿಶ್, ಯೋಗೇಂದ್ರ, ಸುಬ್ಬು, ವರುಣ, ನವೀನ, ನಾಗೇಶ್, ಸಂಜು, ಗಣೇಶ, ವಂಶಿ, ಸುನಿಲ್ ಶೆಟ್ಟಿ, ಚೇತನ್, ಸೂಹೆಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net