ಸತ್ಯಶುದ್ಧ ಕಾಯಕದಿಂದ ಜೀವನ ಸಾರ್ಥಕ

KAYAKA
Published on

ನರಗುಂದ: ಜಗಜ್ಯೋತಿ ಬಸವಣ್ಣನವರ ಆಶಯದಂತೆ ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕದಿಂದ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಬಸವ ಕೇಂದ್ರದ ನಿರ್ದೇಶಕ ಮಂಡಳಿ ಸದಸ್ಯ ಅಪ್ಪಣಗೌಡ ನಾಯ್ಕರ ಹೇಳಿದರು.

ಪಟ್ಟಣದ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಶ್ರೀಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಚನಾಮೃತ ಶ್ರಾವಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

12ನೇ ಶತಮಾನದ ಶಿವಶರಣರ ಆಚಾರಗಳ ಬದಲು ಇಂದಿನ ಕಾಲದ ನಮ್ಮ ಮಕ್ಕಳಿಗೆ ಕೇವಲ ವಿಚಾರಗಳನ್ನಷ್ಟೇ ಹೇಳಿಕೊಡುತ್ತಿದ್ದೇವೆ. ಶರೀರ ಶುದ್ಧೀಕರಣಕ್ಕಾಗಿ ಒಂದು ತಿಂಗಳ ಪರ್ಯಂತ ಪ್ರತಿಯೊಬ್ಬರೂ ಶ್ರಾವಣ ಆಚರಿಸಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ ಅವರು, ಬಸವ ಕೇಂದ್ರದ ಕಾರ್ಯವನ್ನು ಶ್ಲಾಘಿಸಿದರು. ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಎಸ್.ವಿ. ಜಕ್ಕಲಿ, ಕಲಾಶ್ರೀ ಹಾದಿಮನಿ, ವಿ.ಎನ್. ಕೊಳ್ಳಿಯವರ, ಎಂ.ಎಸ್. ಯಾವಗಲ್ ಮಾತನಾಡಿದರು.

ಸೀಮಣ್ಣ ಗೊವೇಶ್ವರ, ಎಸ್.ವೈ.ಹುಂಬಿ, ಸಿ.ಎಚ್.ಕೋರಿ, ಲೀಲಕ್ಕ ಹಸಬಿ, ಜಿ.ಟಿ.ಗುಡಿಸಾಗರ, ರಮೇಶಗೌಡ ಕರನಕನಗೌಡ್ರ, ಸುಕನ್ಯಾ ಸಾಲಿ, ಗಂಗಮ್ಮ ಪಾಟೀಲ, ಶಿವಲೀಲಾ ಕೊಳ್ಳಿಯವರ, ಎಂ.ಬಿ. ಪಾಟೀಲ, ವೈ.ಐ. ಕುಂಬಾರ, ನಾಗಶ್ರೀ ಜಾಧವ, ಶಿವಪ್ಪ ಬೋಳಶೆಟ್ಟಿ, ಕೆ.ಜಿ. ಮಳಿಮಠ, ಜೆ.ಆರ್.ಕದಂ. ಮಾರುತಿ ಬೋಸಲೆ, ಶಂಕ್ರಣ್ಣ ವಾಳದ, ಎಸ್.ಎಸ್. ಸುಂಕದ, ಪತ್ರೆಪ್ಪ ಹಡಪದ, ಸಂಗಪ್ಪ ಪೂಜಾರ, ಬಿ.ಎಸ್.ನಾಶಿಶೆಟ್ಟಿ, ವಿ.ಕೆ. ಹಿರೇಗೌಡ್ರ ಇದ್ದರು. ಸಮಗಾರ ಹರಳಯ್ಯ ಕಿರುನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು, ವಚನಾಮೃತ ಶ್ರಾವಣದ ನಿರಂತರ ಸೇವೆ ಸಲ್ಲಿಸಿದ ಮಹನೀಯರನ್ನು ಬಸವ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಬಿ. ಭಜಂತ್ರಿ ಮಂಜುಳಾ ಅಸುಂಡಿ, ನಿವೃತ್ತ ಪಿಎಸ್‌ಐ ಟಿ.ಆರ್.ಉಳ್ಳೇಗಡ್ಡಿ ವಚನ ಸಂಗೀತ ಪ್ರಸ್ತುತಪಡಿಸಿದರು. ಆರ್.ಎಚ್. ತಿಗಡಿ, ಆರ್.ಬಿ.ಚಿನಿವಾಲರ, ವಿ.ಎನ್.ಕೊಳ್ಳಿಯವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net