ಆಧ್ಯಾತ್ಮಿಕ ಕಾರ್ಯಗಳಿಂದ ಜೀವನ ಸಾರ್ಥಕ

Aduge mane
Published on

ಅಳ್ನಾವರ: ಶ್ರಾವಣ ಮಾಸದ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನ ಸಾರ್ಥಕಗೊಳಿಸಲು ಸಾಧ್ಯವಿದೆ ಎಂದು ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ನೂತನ ಅಡುಗೆ ಮನೆ ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಪ್ರವಚನ ಆಲಿಸುವ ಮೂಲಕ ಶರಣರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. 12ನೇ ಶತಮಾನದಲ್ಲಿ ಧಾರ್ಮಿಕ, ಆರ್ಥಿಕ ಹಾಗೂ ಸ್ತ್ರೀ ಸಮಾನತೆ ಕಾರ್ಯ ನಡೆಸಿ ವಿಶ್ವಗುರು ಎನಿಸಿಕೊಂಡಿರುವ ಬಸವಣ್ಣನವರ ಮಾರ್ಗದಲ್ಲಿ ಸಾಗಬೇಕು ಎಂದರು.

ಕಿವಂಡೆಬೈಲ್‌ದ ರವಿಶಾಸ್ತ್ರಿ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಅವತರಿಸಿ ಜನರ ಆತ್ಮ ಕಲ್ಯಾಣಗೊಳಿಸಿದ ಮಹಾನ್ ಶರಣರ ಮಾರ್ಗದಲ್ಲಿ ನಡೆದು ಜನ್ಮ ಸಾರ್ಥಕತೆಗೆ ಗುರುವಿನ ಮಾರ್ಗದರ್ಶನ ಅವಶ್ಯವಿದೆ. ಭಕ್ತಿಯಿಂದ ಕೈಗೊಳ್ಳುವ ಧರ್ಮಕಾರ್ಯಗಳಿಂದ ಹಾಗೂ ಭಗವಂತನ ಧ್ಯಾನದಿಂದ ಪಾಪಗಳನ್ನು ಕಳೆದುಕೊಳ್ಳಬಹುದು ಎಂದರು.

ಪ್ರವಚನಕಾರ ದುಮ್ಮವಾಡದ ಸರ್ಪಭೂಷಣ ದೇವರು ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಕೌಜಲಗಿ, ಮಲ್ಲೇಶಪ್ಪ ಕುಂಬಾರ, ಬಸಯ್ಯ ಹಿರೇಮಠ, ವಿ.ಬಿ. ಲಿಂಗನಮಠ, ಪಿ .ಬಿ. ತೇಗೂರ, ವಿಜಯ ಕೌಜಲಗಿ, ಮಹಾಂತೇಶ ಮದ್ನಳ್ಳಿ, ಬಾಬಣ್ಣ ಕೋಟಿ, ಬಸಣ್ಣ ಕಿತ್ತೂರ, ಲಿಂಗರಾಜ ಮೂಲಿಮನಿ, ಸುವರ್ಣಾ ತೇಗೂರ, ಸುಮಾ ಸೊಪ್ಪಿ ಇತರರು ಇದ್ದರು. ಬಸವೇಶ ಹಟ್ಟಿಹೋಳಿ, ಪೂರ್ಣಿಮಾ ಮುತ್ನಾಳ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net