ಪುಣ್ಯಕ್ಷೇತ್ರಗಳ ಪಾದಯಾತ್ರೆಯಿಂದ ಬದುಕು ಸಾರ್ಥಕ್ಯ

6Kolavi2
ಕೊಳವಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸೇವಾ ಪಾದಯಾತ್ರೆ ಸಮಾರಂಭದಲ್ಲಿ ಬಸಪ್ಪ ಹಟ್ಟಿಗೌಡರ, ಮಹಾದೇವಿ ಹಟ್ಟಿಗೌಡರ ಅವರನ್ನು ಸನ್ಮಾನಿಸಲಾಯಿತು. ಟಿ.ಆರ್.ಕಾಗಲ್, ಸುರೇಶ ಸನದಿ, ಮಡ್ಡೆಪ್ಪ ತೋಳಿನವರ ಇತರರಿದ್ದರು.
Published on

ಕೊಳವಿ: ಅಧ್ಯಾತ್ಮದ ಮೇಲಿನ ಒಲವು ಮನುಷ್ಯ ನನ್ನು ಜ್ಞಾನಿಯಾಗಿಸುತ್ತದೆ. ಜತೆಗೆ ಪುಣ್ಯಕ್ಷೇತ್ರಗಳ ಪಾದಯಾತ್ರೆ ಯಿಂದ ಬದುಕು ಸಾರ್ಥಕವಾಗಲು ಸಾಧ್ಯವಾಗುತ್ತದೆ ಎಂದು ಅರ್ಚಕ ಪತ್ರಯ್ಯ ಹುಲಕಂತಿ ಹೇಳಿದರು. ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೊಳವಿ-ಗೋಕಾಕದಿಂದ ಗೋಕರ್ಣ ಹಾಗೂ ಉಳವಿ ಕ್ಷೇತ್ರಗಳಿಗೆ 25ನೇ ವರ್ಷದ ಪಾದಯಾತ್ರೆ ಪೂರೈಸಿದ ಸಂತ ಶರಣರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಟಿ.ಆರ್ ಕಾಗಲ್ ಮಾತನಾಡಿ, ಸಾಮಾಜಿಕ ಒಳತಿಗಾಗಿ ಪಾದಯಾತ್ರೆ ಕೈಗೊಂಡು ಧಾರ್ಮಿಕ ಜಾಗೃತಿಗಾಗಿ ಶ್ರಮಿಸುತ್ತಿರುವ ಸಂತ ಶರಣರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು. ಬಸಪ್ಪ ಹಟ್ಟಿಗೌಡರ, ಮಹಾದೇವಿ ಹಟ್ಟಿಗೌಡರ, ರಾಮಪ್ಪ ಹಡಿಗಿನಾಳ, ಶಿವಲಿಂಗಪ್ಪ ಕಳ್ಳಿಗುದ್ದಿ, ಬಸವರಾಜ ಕಬಾಡಗಿ, ಬೀರಪ್ಪ ಕುರಿ, ಮುದಕಪ್ಪ ನಾಗನೂರ ಅವರನ್ನು ಸನ್ಮಾನಿಸಲಾಯಿತು. ಬಸಯ್ಯ ಹುಲಕಂತಿ, ಆನಂದ ಹಟ್ಟಿಗೌಡರ, ಚಂದ್ರಶೇಖರ ಯರಗಟ್ಟಿ, ಸೋಮಲಿಂಗ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net