ಸತತ ಅಧ್ಯಯನದಿಂದ ಜೀವನ ಸುಖಮಯ

RTL PRATIBHA
Published on


ರಟ್ಟಿಹಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಮತ್ತು ಇಷ್ಟ ಪಟ್ಟು ಅಧ್ಯಯನ ಮಾಡಿದರೆ ಮುಂದಿನ ಜೀವನ ಸುಖಮಯವಾಗಿರುತ್ತದೆ. ಜ್ಞಾನದ ಸಂಪಾದನೆಗೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ನಾವು ಸಂಪಾದಿಸಿದ ಜ್ಞಾನ ಮಾತ್ರ ಸದಾ ನಮ್ಮೊಂದಿಗಿರುತ್ತದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎನ್.ಸಿ. ಕಠಾರೆ ಹೇಳಿದರು.
ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಭವ್ಯ ರಾಷ್ಟ್ರ ನಿರ್ವಣಕ್ಕೆ ಸಂಕಲ್ಪ ತೊಡಬೇಕು’ ಎಂದರು.
ಮಾಸೂರಿನ ಬಿ.ಟಿ. ಪಾಟೀಲ ಕಾಲೇಜ್ ಪ್ರಾಚಾರ್ಯ ಕೆ.ಆರ್. ಕೋಣ್ತಿ ಮಾತನಾಡಿದರು. ತಾಲೂಕು ಕಸಾಪ ವತಿಯಿಂದ 52 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಜಿ. ರಾಘವೇಂದ್ರ, ಕಸಾಪ ತಾಲೂಕು ಕೋಶಾಧ್ಯಕ್ಷ ಸುರೇಶ ಮಲ್ಲಾಡದ, ಕಾರ್ಯದರ್ಶಿ ರಾಜು ಹರವಿಶೆಟ್ಟರ್, ಸಿ.ಡಿ. ಕರಿಯಣ್ಣನವರ, ಎಂ.ಸಿ. ತುಮ್ಮಿನಕಟ್ಟಿ, ಕೆ.ವೈ. ಬಾಜೀರಾಯರ್, ಶಂಭಣ್ಣ ಗೂಳಪ್ಪನವರ, ಜಿ.ಜಿ. ಕಮ್ಮಾರ, ಕೃಷ್ಣರಾಜ ವೆರ್ಣೆಕರ, ಹೇಮಣ್ಣ ನಿಂಬೆಗುಂದಿ, ಎಂ. ಕುಬೇರಪ್ಪ, ಕೆ.ವಿ. ವರಹದ, ಬಿ.ಡಿ. ಪಾಟೀಲ, ಸಿ.ಎಸ್. ಚಕ್ರಸಾಲಿ, ಬೀರೇಶ ಕರಡಣ್ಣೆನವರ, ಕಸಾಪ ಸದಸ್ಯರು, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕುಮಾರ ಕಡೇಮನಿ ಕನ್ನಡ ಚಿತ್ರಗೀತೆಗಳನ್ನು ಹೇಳಿ ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net