ಸತಿ-ಪತಿ ಮನಸ್ಸು ಒಂದಾದರೆ ಬದುಕು ಬಂಗಾರ,ಬಸವಪ್ರಭು ಶ್ರೀ

CTD 5 MADUVEeee
Published on

ಚಿತ್ರದುರ್ಗ: ಎರಡು ಕಣ್ಣುಗಳಿದ್ದರೂ ದೃಷ್ಟಿ ಒಂದೇ ಎಂಬಂತೆ ಸಂಸಾರದಲ್ಲಿ ಸತಿ-ಪತಿಯ ಮನಸ್ಸು ಒಂದಾಗಿದ್ದರೆ ಬದುಕು ಬಂಗಾರ ವಾಗುತ್ತದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದೊಂದಿಗೆ ಮುರುಘಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ 32ನೇ ವರ್ಷ ದ 11ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,ದಾಂಪತ್ಯದಲ್ಲಿ ಸತಿ-ಪತಿ ಆ ಲೋಚನೆ ಒಂದೇ ಆದರೆ ಜೀವನ ಸ್ವರ್ಗ,ಇಲ್ಲ ನರಕವಾಗುತ್ತದೆ.

ಸ್ವರ್ಗ ನರಕಗಳೆಲ್ಲೂ ಇಲ್ಲ,ಅವು ಮಾನವನ ಹೃದಯ,ನಾಲಿಗೆಯಲ್ಲಿವೆ. ಹೃದಯದಲ್ಲಿ ದ್ವೇಷವಿದ್ದರೆ ಬದುಕು ನರಕವಾಗುತ್ತದೆ. ಅಂ ತರಂಗ ಉತ್ತಮವಾಗಿದ್ದರೆ ಮಾತು,ಕೃತಿಗಳು ಸಾತ್ವಿಕವಾಗಿರುತ್ತವೆ. ಕಷ್ಟ ಸಹಿಸಿಕೊಂಡವರು ಜೀವನದಲ್ಲಿ ಜಯ ಸಾಧಿಸುತ್ತಾರೆಂದು ನವ ದಂಪತಿಗೆ ಸಲಹೆ ನೀಡಿದರು.

ಸಮ್ಮುಖ ವಹಿಸಿದ್ದ ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ,ಮುರುಘಾಮಠದಲ್ಲಿ ಜಾತ್ಯತೀತವಾಗಿ ಕಲ್ಯಾಣ ಕಾರ‌್ಯಗಳು ನಡೆದುಕೊಂಡು ಬರುತ್ತಿರುವುದು ವಿಶೇಷ. ಹೂವು ಮತ್ತು ದಾರ ಒಂದಾಗಿ ಹಾರವಾಗುವಂತೆ ಪತಿ ಮತ್ತು ಸತಿ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತು ಅನ್ಯೋನ್ಯವಾಗಿ ಜೀವನ ಸಾಗಿಸಬೇಕೆಂದರು.

5 ಜೋಡಿಗಳ ವಿವಾಹ ನೆರವೇರಿತು. ಶ್ರೀ ಚೆನ್ನಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅವರ ಜಯಂತಿ ಆ ಚರಿಸಲಾಯಿತು.ನಿಪ್ಪಾಣಿ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ,ಶ್ರೀ ತಿಪ್ಪೇರುದ್ರ ಸ್ವಾಮೀಜಿ,ಶ್ರೀ ಬಸವಮೂರ್ತಿಕುಂಬಾರ ಗುಂಡಯ್ಯ ಸ್ವಾಮೀಜಿ,ಪೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಪ್ರಕಾಶ್‌ದೇವರು ಸ್ವಾಗತಿಸಿ,ಎನ್.ಜಿ.ಶಿವಕುಮಾರ್ ನಿರೂಪಿಸಿದರು.ಟಿ.ಪಿ. ಜ್ಞಾನಮೂರ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net