ಸಂಸ್ಕಾರದ ಕೊರತೆಯಿಂದ ಬದಕು ದುಸ್ತರ

Published on

ಕಲಕೇರಿ: ಸಂಸ್ಕಾರದ ಕೊರತೆಯಿಂದಾಗಿ ಬದುಕು ದುಸ್ತರವಾಗುತ್ತಿದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ರೋಗ ತಜ್ಞರಾದ ಡಾ. ಪ್ರಭುಗೌಡ ಲಿಂಗದಳ್ಳಿ ಕಳವಳ ವ್ಯಕ್ತಪಡಿಸಿದರು.

ಸಮೀಪದ ಬೆಕಿನಾಳ& ವಣಕ್ಯಾಳದ ಮಾತೆ ಮಹೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾರೂಢ ಸ್ವಾಮಿಗಳ ಪುರಾಣ ಮಂಗಲೋತ್ಸವ, ಧರ್ಮ ಸಭೆ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮ, ಸಂಸತಿಗೆ ಪೂರಕವಾದ ಶಿಣದ ಅವಶ್ಯಕತೆ ಇದೆ. ಬದುಕಿನಲ್ಲಿ ಸೋತು ಗೆದ್ದಾಗ ಮಾತ್ರ ಜೀವನದ ಮೌಲ್ಯ ಅರಿಯಲು ಸಾಧ್ಯ ಎಂದರು.

ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು, ಚಬನೂರ ಹಿರೇಮಠದ ಶ್ರೀರಾಮಲಿಂಗಯ್ಯ ಸ್ವಾಮೀಜಿ ಮಾತನಾಡಿ, ದೀಪದಿಂದ ಮನೆಯಲ್ಲಿನ ಅಂಧಕಾರ ದೂರವಾಗುವಂತೆ ಗುರುವಿನ ಕೃಪೆಯಿಂದ ಜೀವನದಲ್ಲಿ ಆವರಿಸಿರುವ ಕತ್ತಲೆ ದೂರಾಗುತ್ತದೆ ಎಂದರು.

ಆಲೂರಿನ ಗುರುಕೆಂಚವೃಷಬೇಂದ್ರ ಶಿವಾಚಾರ್ಯರು, ಮಾತೆ ಮಹೇಶ್ವರಿ ದೇವಸ್ಥಾನದ ಮಹೇಶ ಮುತ್ಯಾಮಾತನಾಡಿದರು.

ಬೆಕಿನಾಳ ಮತ್ತು ವಣಕಿಹಾಳ ಗ್ರಾಮದ ಸರ್ಕಾರಿ ನೌಕರರನ್ನು, ಗ್ರಾಮ ಪಂಚಾಯಿತಿ, ಪಿಕೆಪಿಎಸ್​, ಎಸ್​ಡಿಎಂಸಿ ಸದಸ್ಯರನ್ನು ಸನ್ಮಾನಿಸಲಾಯಿತು.

ಕಲಹಳ್ಳಿಯ ಭಾಗ್ಯವಂತಿ ನಾಟ್ಯ ಸಂದ ಕಲಾವಿದರಿಂದ ಶ್ರೀ ತ್ತರಗಿ ಭಾಗಮ್ಮ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ಅಜಲಾಪುರದ ಶಂಕರಗೌಡ ತಾತ, ಅರ್ಜುಣಗಿಯ ಮಡಿವಾಳಯ್ಯ ಶಾಸ್ತ್ರಿ, ಅಂಕಲಗಿಯ ಚನ್ನಮಲ್ಲಯ್ಯ ಸ್ವಾಮೀಜಿ, ಸಚಿನಗೌಡ ಪಾಟೀಲ ಕುದರಿಸಾಲೋಡಗಿ, ನಾನಾಗೌಡ ಪಾಟೀಲ, ರವೀಂದ್ರ ಸುಧಾಕರ, ಶಿವಶರಣ ಸಜ್ಜನ, ಕಾಶಿಂ ನಾಯ್ಕೋಡಿ, ರಮೇಶ ಹೆಂಡಿ, ದೇವಿಂದ್ರಪ್ಪ ವಗ್ಗರ್​, ಬಸನಗೌಡ ಪಾಟೀಲ, ನಿಂಗಯ್ಯ ಮಠ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net