ಕಾಯಕ ಜೀವನದಿಂದ ಬದುಕು ಉಜ್ವಲ

h25-jagadguru
????????????
Published on

ಹುಬ್ಬಳ್ಳಿ: ಜೀವನದಲ್ಲಿ ಏನೇ ಸವಾಲುಗಳು ಬಂದರೂ ಅದನ್ನು ಸಮರ್ಥದಿಂದ ಎದುರಿಸುವ ಆತ್ಮಬಲ ಬೇಕು. ಶ್ರಮ ಮತ್ತು ಪ್ರಯತ್ನದಿಂದ ಬದುಕು ಉಜ್ವಲಗೊಳ್ಳಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಇಲ್ಲಿಯ ಜೆ.ಪಿ. ನಗರದ ಶ್ರೀ ಈಶ್ವರ ದೇವಸ್ಥಾನ ಪಕ್ಕದಲ್ಲಿ ಭಾನುವಾರ ಅನುಗ್ರಹ ವಾಣಿಜ್ಯ ಸಂಕೀರ್ಣ ಮತ್ತು ಉಜ್ವಲ ಎಂಟರ್‌ಪ್ರೈಸಿಸ್ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.

ಸೂಡಿ ಜುಕ್ತಿಹಿರೇಮಠದ ಶ್ರೀ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಸುಳ್ಳದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಶಿರಕೋಳ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೃಷಿ ವಿಶ್ವವಿದ್ಯಾಲಯದ ಡಾ.ಎಸ್.ಎ. ಪಾಟೀಲ, ಪಿ.ಎಂ. ಪಾಟೀಲ, ಬಸನಗೌಡ ಪಾಟೀಲ, ಪ್ರಕಾಶ ಬೆಂಡಿಗೇರಿ, ಬಸವರಾಜ ಸುಳ್ಳದ, ಆರ್.ಎಂ.ಹಿರೇಮಠ, ವಿ.ಜಿ. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿಶ್ವನಾಥ ಹಿರೇಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ. ಕಲಾ ಬಳಗದ ಅಧ್ಯಕ್ಷ ಗದಿಗಯ್ಯ ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net